ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆ ಬಾಗಿಲು ಮುರಿದು ನಗದು ಹಣ ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿ ಯಾಗಿರುವ ಘಟನೆ ಭಟ್ಕಳ ತಾಲೂಕಿನ ಕೈಕಿಣಿ ಗ್ರಾಪಂ ಹೆರಾಡಿಯಲ್ಲಿ ನಡೆದಿದೆ.
ಕಳ್ಳತನಕ್ಕೆ ಒಳಗಾದ ಬಾಡಿಗೆ ಮನೆಯಲ್ಲಿ ನಾಗವೇಣಿ ನಾಯ್ಕ ಹಾಗೂ ಅವರ ಕುಟುಂಬದ ಸದಸ್ಯರು ವಾಸವಾಗಿದ್ದರು. ನಾಗವೇಣಿ ನಾಯ್ಕ ಕಳೆದ 3 ದಿನಗಳ ಹಿಂದೆ ಭಟ್ಕಳದಲ್ಲಿರುವ ತಮ್ಮ ತಾಯಿ ಮನೆಗೆ ಬಂದಿದ್ದು, ಮನೆ ಬಾಗಿಲು ತೆರೆದಿರುವುದನ್ನು ನೋಡಿ ಮನೆಯ ಮಾಲಕರು ನಾಗವೇಣಿಯವರಿಗೆ ಮಾಹಿತಿ ನೀಡಿದ್ದಾರೆ. ಕಳ್ಳರು 5 ಸಾವಿರ ನಗದು ಹಾಗೂ ಚಿನ್ನದ ಸರವೊಂದನ್ನು ಅಪಹರಿಸಿದ್ದಾರೆ. ಮುರುಡೇಶ್ವರ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಎಫ್‍ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.