ಕಾರವಾರ : ನಗರದ ಕ್ರಿಕೆಟ್ ಪ್ರತಿಭೆ ರಣಜಿಯ ಮಾಜಿ ಆಟಗಾರ ರಾಹುಲ್ ಬೋರ್ಕರ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಲೆವಲ್ -2 ಕೋಚಿಂಗ್‌ಗೆ ಆಯ್ಕೆಯಾಗಿದ್ದಾರೆ. 8 ದಿನಗಳ ಈ ಕೋಚಿಂಗ್ ನಲ್ಲಿ ತೇರ್ಗಡೆಯಾಗಿದ್ದಾರೆ.ಅವರು ರಣಜಿ ಹಾಗೂ ಐಪಿಎಲ್ ತಂಡಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಬಹುದು. ಲೆವೆಲ್-3 ತೇರ್ಗಡೆಯಾದರೆ ಅಂತರಾಷ್ಟ್ರೀಯ ತಂಡಗಳಿಗೆ ಕೋಚ್ ಆಗಿ ತರಬೇತಿ ನೀಡಬಹುದು. ರಾಹುಲ್ ಬೋರ್ಕರ್ ಅವರು ಈಗಾಗಲೇ ಯುಎಸ್ ಅಂಡರ್-17 ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ದುಬೈನಲ್ಲೂ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಲೆವಲ್ -2 ಕೋಚಿಂಗ್‌ಗೆ ರಾಹುಲ್ ಬೋರ್ಕರ್ ಆಯ್ಕೆ
