ಬೆಂಗಳೂರು: ರಾಜ್ಯದಲ್ಲಿ ಡಯಾಲಿಸಿಸ್ ಸೇವೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ಒಂದು ತಿಂಗಳ ಅವಧಿಯಲ್ಲಿಯೇ ಸುಸಜ್ಜಿತ, ಸುವ್ಯವಸ್ಥಿತ ಡಯಾಲಿಸಿಸ್ ವ್ಯವಸ್ಥೆಯನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಕೆ. ಸುಧಾಕರ್ ಹೇಳಿದ್ದಾರೆ.
ರಾಜ್ಯದ ಜನರು ಆತ್ಮವಿಶ್ವಾಸದಿಂದ ಸೇವೆ ತೆಗೆದುಕೊಳ್ಳುವಂತೆ ಪೂರಕವಾಗಿ ಆರೋಗ್ಯ ವ್ಯವಸ್ಥೆ. ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಸ್ತುತ ಡಯಾಲಿಸಿಸ್ ಸೇವಾ ಕೇಂದ್ರಗಳಲ್ಲಿ ರೋಗಿಗಳಿಗೆ ಅಗತ್ಯ ಔಷಧಗಳನ್ನು ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಬಡರೋಗಿಗಳಿಗೆ ಡಯಾಲಿಸಿಸ್, ಔಷಧಗಳ ಖರೀದಿಗೆ ಆರ್ಥಿಕ ಸಮಸ್ಯೆಯಾಗುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.