ಹೊನ್ನಾವರ : ತಾಲೂಕಿನ ಬಂದರು ರಸ್ತೆಯಲ್ಲಿರುವ ತುಳಸಿ ಫಾರ್ಮ್ ಔಷಧಿ ಮಳಿಗೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಬಗ್ಗೆ ಎಸ್ಪಿ ಕಚೇರಿ ಗುರುವಾರ ರಾತ್ರಿ ಮಾಹಿತಿ ನೀಡಿದೆ. ಮೃತ ವ್ಯಕ್ತಿ ಸುಮಾರು 45 ರಿಂದ 50 ವರ್ಷದೊಳಗಿನವನಾಗಿದ್ದು ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ವ್ಯಕ್ತಿ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಹೊನ್ನಾವರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
