ಶಿರಸಿ : ಗ್ರಾಮೀಣ ಭಾಗದ ರಸ್ತೆಗಳ ನಿರ್ವಹಣೆಗೆ ಬರುತ್ತಿದ್ದ ಹಣ ಈ ವರ್ಷ ಮಳೆಗಾಲ ಕಳೆದರೂ ಬಾರದಿರುವುದರಿಂದ ಕಚ್ಚಾರಸ್ತೆಗಳ ನಿರ್ವಹಣೆ ಇಲ್ಲದೇ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜಿಲ್ಲಾ ಪಂಚಾಯತ್ ಅಡಿ ಬರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಸಿಎಂಜಿಎಸ್‌ವೈ, ಟಾಸ್ಕ್ ಪೋರ್ಸ್ ಶಾಸಕರ ವಿಶೇಷ ಅನುದಾನದ ಅಡಿ ಅನುದಾನ ಮಂಜೂರಾಗುತ್ತಿತ್ತು ಆದರೆ, ಈ ಬಾರಿ ಸಿಎಂಜಿಎಸ್‌ವೈ ಅಡಿ ಕೇವಲ 2 ಕೋಟಿ ರೂ. ಅನುದಾನ ಮಂಜೂರಾಗಿದ್ದು ಜಿಲ್ಲಾ ಪಂಚಾಯಿತಿ ಇಂಜಿನಿಯರಿoಗ್ ಶಿರಸಿ ವಿಭಾಗ ವ್ಯಾಪ್ತಿಯ 6 ತಾಲೂಕುಗಳಲ್ಲಿ ಒಟ್ಟು 7947. 30 ಕಿ. ಮೀ. ಗ್ರಾಮೀಣ ರಸ್ತೆಗೆ ಅನುದಾನದ ಕೊರತೆ ಉಂಟಾಗಿದೆ. ಈ ಬಾರಿ ಮಳೆಯ ಪ್ರಮಾಣವೂ ಹೆಚ್ಚಾಗಿದ್ದು ಗ್ರಾಮೀಣ ಭಾಗದ ರಸ್ತಗಳು ಸಂಚಾರಕ್ಕೆ ಯೋಗ್ಯವಲ್ಲದಷ್ಟು ಹಾಳಾಗಿದೆ. ಶಿರಸಿ – ಸಿದ್ದಾಪುರ ಭಾಗದಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಹೆಚ್ಚಿರುವ ಕಾರಣ ಅದರ ಅಭಿವೃದ್ಧಿ ಸರ್ಕಾರ ಆದಷ್ಟು ಶೀಘ್ರದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ. ವಿವಿಧ ಯೋಜನೆಗಳ ಮುಖಾಂತರ ಅಭಿವೃದ್ಧಿ ಹಣ ಬರಬೇಕಾಗಿರುವುದಕ್ಕೆ ಬ್ರೇಕ್ ಬಿದ್ದಿರುವುದು ಸಂಚಾರಕ್ಕೆ ತೊಂದರೆಯಾಗಿದ್ದು, ಶೀಘ್ರದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ
ಗ್ರಾಮೀಣ ಭಾಗದ ರಸ್ತೆಗಳ ನಿರ್ವಹಣೆಗಾಗಿ ಒತ್ತಾಯ
