ಗೋಕರ್ಣ: ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸುವಂಥ ಘಟನೆಯೊಂದು ಶುಕ್ರವಾರ ಬೆಳಗ್ಗೆ ನಡೆದಿದೆ. ಹೌದು.. ಮನೆಯ ಟೆರೇಸ್ ಮೇಲೆ ಇದ್ದ ವ್ಯಕ್ತಿಯನ್ನು ರಾಡ್’ನಿಂದ ಹೊಡೆದು ಸಾಯಿಸಿ, ಆರೋಪಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಆರೋಪಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಓಡಿ ಹೋಗಿ ಸಮುದ್ರದಲ್ಲಿ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಸ್ಥಳೀಯರು ಆರೋಪಿಯನ್ನು ಹಿಡಿದು ಪೆÇಲೀಸರಿಗೊಪ್ಪಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕೊಲೆಯಾದ ವ್ಯಕ್ತಿಯು ತದಡಿಯ ನಿವಾಸಿ ವಿವೇಕಾನಂದ ಪುತ್ತು ಶ್ಯಾನಭಾಗ. ಕೊಲೆ ಮಾಡಿದ ಆರೋಪಿ ಓರಿಸ್ಸಾ ಮೂಲದವನಾಗಿದ್ದು, ತದಡಿ ಬಂದರಿನಲ್ಲಿ ಮೀನುಗಾರಿಕೆಗೆ ಬಂದಿದ್ದ ಎನ್ನಲಾಗಿದೆ. ಕೊಲೆಗೆ ಸರಿಯಾದ ಕಾರಣ ತಿಳಿದುಬಂದಿಲ್ಲ. ಪೆÇಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.