ಶಿರಸಿ: ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಶಿರಸಿ ಆದಾಯ ತೆರಿಗೆ ಇಲಾಖೆ ಹಾಗೂ ಶಿರಸಿ ಲಯನ್ಸ ಕ್ಲಬ್ ಆಶ್ರಯದಲ್ಲಿ ವಿವಿಧ ಸಂಸ್ಥೆಗಳ ಪ್ರತಿನಿಧಿಗಳಿಂದ ಲಯನ್ಸ್ ಶಾಲಾ ಆವಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಆದಾಯಕರ ಇಲಾಖೆಯ ಶಿರಸಿ ಅಧಿಕಾರಿ ವಿಶ್ವನಾಥ ಉಪ್ಪಿನ ಹಾಗೂ ಅವರ ಕಚೇರಿಯ ಎಲ್ಲಾ ಸಿಬ್ಬಂದಿ, ಹುಬ್ಬಳ್ಳಿ ಆದಾಯಕರ ಅಧಿಕಾರಿ ಪ್ರಶಾಂತ ಕುಂದಾಪುರ, ಶಿರಸಿ ರೋಟರಿ ಕ್ಲಬ್ ಅಧ್ಯಕ್ಷ ರೋಟೇರಿಯನ್ ಪಾಂಡುರಂಗ ಪೈ ಹಾಗೂ ರೋಟರಿ ಸದಸ್ಯರು, ಉತ್ತರ ಕನ್ನಡ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಜಿ.ಜಿ.ಹೆಗಡೆ ಕಡೇಕೊಡಿ, ಶಿರಸಿಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಸುಧೀರ ಭಟ್ ಹಾಗೂ ಎಸ್ ಜಿ.ಹೆಗಡೆ, ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಯನ್ ಪ್ರೊ. ಎನ್.ವಿ.ಜಿ.ಭಟ್, ಉಪಾಧ್ಯಕ್ಷ ಲಯನ್ ಪ್ರಭಾಕರ ಹೆಗಡೆ, ಲಯನ್ಸ್ ಕ್ಲಬ್ ಶಿರಸಿಯ ಅಧ್ಯಕ್ಷ ಎಂ.ಜೆ.ಎಫ್. ಲಯನ್ ಉದಯ ಸ್ವಾದಿ, ಕಾರ್ಯದರ್ಶಿಗಳಾದ ಲಯನ್ ವಿನಯ ಹೆಗಡೆ ಬಸವನಕಟ್ಟೆ, ಕೋಶಾಧ್ಯಕ್ಷ ಅನಿತಾ ಹೆಗಡೆ, ಶಿರಸಿ ಅಡಿಕೆ ವ್ಯಾಪಾರಸ್ಥರ ಸಂಘದ ಲಯನ್ ಕೆ.ಬಿ.ಲೋಕೇಶ ಹೆಗಡೆ, ಇಂಜನೀಯರ್ಸ್ ಸಂಘದ ಅಧ್ಯಕ್ಷ ಲಯನ್ ಶ್ಯಾಮಸುಂದರ ಭಟ್, ಶಿರಸಿ ಲಯನ್ಸ್ ಶಾಲಾ ಮುಖ್ಯಾಧ್ಯಾಪ ಶಶಾಂಕ ಹೆಗಡೆ ಹಾಗೂ ಶಿಕ್ಷಕ ವೃಂದ, ಲಿಯೋ ಕ್ಲಬ್ ಶಿರಸಿಯ ಅಧ್ಯಕ್ಷ ಸ್ತುತಿ ತುಂಬಾಡಿ ಹಾಗೂ ಪದಾಧಿಕಾರಿಗಳು ಲಯನ್ಸ ಶಾಲಾ ಆವಾರದಲ್ಲಿ ವಿವಿಧ ರೀತಿಯ ಗಿಡಗಳನ್ನು ನೆಟ್ಟು ನೀರೆರೆದು ವನಮಹೋತ್ಸವ ನಡೆಸಿಕೊಟ್ಟರು. ಶಿರಸಿ ಲಯನ್ಸ್ ಕ್ಲಬ್ ಹಾಗೂ ಲಯನ್ಸ ಶಾಲೆ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸಿತು.