ಹಳಿಯಾಳ: ತಾಲೂಕಿನ ಭಾಗವತಿಯ ನೀಲವಾಣಿ ಕ್ರಾಸ್ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಂದರ್ ಹಜರತ ಮುಜಾವರ(22) ಬಂಧಿತ ಆರೋಪಿಯಾಗಿದ್ದು ಬಂಧಿತನಿAದ 1400 ರು. ಮೌಲ್ಯದ 130 ಗ್ರಾಂ ಗಾಂಜಾ, ಹಸಿರು ಬಣ್ಣದ ಪ್ಲಾಸ್ಟಿಕ್ ಚೀಲ, ಪೇಪರ್ ಹಾಗೂ 200 ರು,ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗಾಂಜಾ ಮಾರುತ್ತಿದ್ದ ಕಲಂದರ್ ಪೋಲೀಸರ ವಶಕ್ಕೆ
