ಯಲ್ಲಾಪುರ: ನಮ್ಮ ನಗರದ ಸ್ವಚ್ಛತೆ ಕೇವಲ ಪೌರಕಾರ್ಮಿಕರೇ ಮಾಡಬೇಕು ಎಂದು ಸಾರ್ವಜನಿಕರು ತಿಳಿದುಕೊಳ್ಳದೆ ತಮ್ಮ ಮನೆಯ ಅಕ್ಕಪಕ್ಕ ಸ್ವಚ್ಛತೆ ಕಾಪಾಡಬೇಕು. ಕರ್ನಾಟಕ ಜರ್ನಲಿಸ್ಟ ಯುನಿಯನ್ ನವರು ಸ್ಮಶಾನ ಸ್ವಚ್ಛತೆಗೆ ಕರೆ ಕೊಟ್ಟಾಗ ನೂರಾರು ಜನ ಸ್ವ ಇಚ್ಛೆಯಿಂದ ಆಗಮಿಸಿ ಕೈ ಜೋಡಿಸಿದ್ದರು. ಇದೇ ತರಹ ಹಲವು ಸಂಘಟನೆಗಳು ಸೇರಿ ಕೈ ಜೋಡಿಸಿದರೆ ಪೌರಕಾರ್ಮಿಕರ ಒತ್ತಡ ಕಡಿಮೆ ಮಾಡಬಹುದು ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಅವರು ಇಂದು ಯಲ್ಲಾಪುರ ಪಟ್ಟಣ ಪಂಚಾಯತ ಸಭಾಭನದಲ್ಲಿ ಪೌರಕಾರ್ಮಿಕರ ದಿನಾಚರಣೆ ನಿಮಿತ್ತ ಪೌರಕಾರ್ಮಿಕರನ್ನೂ ಸನ್ಮಾನಿಸಿ ಮಾತನಾಡಿದರು. ಮಳೆ-ಗಾಳಿ ಹಬ್ಬ ಹರಿದಿನಗಳಲ್ಲೂ ದುಡಿಯುವ ಪೌರಕಾರ್ಮಿಕರು ಕರ್ತವ್ಯ ನಿಷ್ಟೆ ಮೆಚ್ಚುವಂತದ್ದು. ಜನಪ್ರತಿನಿಧಿಗಳ ಹೆಸರು ಉಳಿಸಲು ಪೌರಕಾರ್ಮಿಕರು ಕ್ರಿಯಾ ಶೀಲರಾಗಿದ್ದರೆ ಮಾತ್ರ ಸಾಧ್ಯ ಎಂದು ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್ ಹೇಳಿದರು.
ಆರೊಗ್ಯ ನಿರೀಕ್ಷಕ ಗುರು ಗಡಗಿ ಮಾತನಾಡಿ ಕೇವಲ 16 ಪೌರಕಾರ್ಮಿಕರ ಸಹಾಯದೊಂದಿಗೆ ಯಲ್ಲಾಪುರ ನಗರ ಸ್ವಚ್ಚವಾಗಿಟ್ಟು ಕೊಳ್ಳುವುದು ಕಷ್ಟದ ಕೆಲಸ ಆದರು ನಮ್ಮ ಪಟ್ಟಣ ಪಂಚಾಯತ ಪೌರ ಕಾರ್ಮಿಕರು ಶ್ರಮ ಶ್ಲಾಘನಿಯ ಎಂದು ಹೇಳಿದರು.
ಸಮುದಾಯ ಸಂಘಟನಾ ಅಧಿಕಾರಿ ಹೇಮಾವತಿ ಭಟ್ಟ ಪೌರಕಾರ್ಮಿಕರಿಗೆ ರಾಜ್ಯಸರಕಾರ ವಿಶೆಷ ಭತ್ಯೆ 3500 ರಿಂದ 7000 ರೂಪಾಯಿ ಎರಿಸಿರುವದನ್ನೂ ತಿಳಿಸಿ ಚೆಕ್ ವಿತರಿಸಿದರು
ಪೌರಕಾರ್ಮಿಕರ ದಿನಾಚರಣೆ ನಿಮಿತ್ತ ಪೌರಕಾರ್ಮಿಕರಿಂದ ಆರ್ಕೆಸ್ಟ್ರಾ ನಡೆಸಿ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಅಮಿತ್ ಅಂಗಡಿ, ಪಟ್ಟಣ ಪಂಚಾಯತ ಸದಸ್ಯ ರಾಜು ನಾಯ್ಕ, ಸತೀಶ ನಾಯ್ಕ, ಸೊಮೇಶ್ವರ ನಾಯ್ಕ ಪ್ರಶಾಂತ ತಳವಾರ ಉಪಸ್ಥಿತರಿದ್ದರು. ಸಮುಧಾಯ ಸಂಘಟನಾ ಅಧಿಕಾರಿ ಹೇಮಾವತಿ ಭಟ್ಟ ನಿರೂಪಿಸಿದರು.