ದಾಂಡೇಲಿ :
ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿರುವ ದಾಂಡೇಲಿ- ಜೊಯಿಡಾ ತಾಲೂಕಿನ ಪ್ರವಾಸೋದ್ಯಮದ ಕಳೆದ ಕೆಲ ದಿನಗಳಿಂದ ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದರಿAದ ದುಃಸ್ಥಿತಿಯತ್ತ ಸಾಗಿತ್ತು. ಇಲ್ಲಿಯ ಪ್ರಮುಖ ಕೇಂದ್ರ ಬಿಂದುವಾಗಿದ್ದ ಕಾಳಿ ನದಿಯಲ್ಲಿನ ಜಲಕ್ರೀಡೆಗಳು
ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿದ ಕಾರಣ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡು ಪ್ರವಾಸೋದ್ಯಮ ಚಟುವಟಿಕೆ ಕುಂಠಿತಗೊAಡಿತ್ತು. ಸೆ. 21ರಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಜಲಕ್ರೀಡೆಗಳು ಹಾಗೂ ಜಲ ಸಂಬAಧಿತ ಚಟುವಟಿಕೆಗಳಿಗೆ ಅನುಮತಿಯನ್ನು ನೀಡಿ ಆದೇಶವನ್ನು ಹೊರಡಿಸಿದ್ದರಾರೆ. ದಾಂಡೇಲಿ- ಜೊಯಿಡಾ ತಾಲೂಕಿನ ಪ್ರವಾಸೋದ್ಯಮದ ಬಹುದೊಡ್ಡ ಶಕ್ತಿಯಾದ ಜಲಕ್ರೀಡೆ ಹಾಗೂ ಜಲ ಸಂಪನ್ಮೂಲ ಸಂಬAಧಿತ ಚಟುವಟಿಕೆಗಳಿಗೆ ಇದೀಗ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಅನುಮತಿಯನ್ನು ನೀಡುವುದರ ಮೂಲಕ ಪ್ರವಾಸೋದ್ಯಮ ಮತ್ತೆ ಈ ಹಿಂದಿನ ಗತವೈಭವವನ್ನು ಪಡೆಯಲು ತುದಿಗಾಲಲ್ಲಿ ನಿಂತಿದೆ. ಈ ಭಾಗದ ಪ್ರವಾಸೋದ್ಯಮದ ಪ್ರಗತಿಗೆ ವಿಶೇಷ ಆಸಕ್ತಿ ವಹಿಸಿರುವ ಜಿಲ್ಲಾಧಿಕಾರಿ, ಜಲಕ್ರೀಡೆಗೆ ಅನುಮತಿಯನ್ನು ನೀಡುವ ಬಗ್ಗೆ ಸರಕಾರ ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆದಿದ್ದರು ಅಲ್ಲದೇ
ದಾಂಡೇಲಿ ಜೊಯಿಡಾ ಹೋಮ್ ಸ್ಟೇ, ರೆಸಾಟ್ಸ್ ಮಾಲಕರ ಸಂಘವು ಖುದ್ದಾಗಿ ಕಂದಾಯ ಸಚಿವ ಅಶೋಕ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್,ಶಾಸಕ ಆರ್.ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟೇಕರ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆಯವರು ಸಹ ಜಲಕ್ರೀಡೆ ಆರಂಭಕ್ಕೆ ತಮ್ಮದೇ ಆದ ರೀತಿಯಲ್ಲಿ ಸರಕಾರದ ಮಟ್ಟದಲ್ಲಿ ಒತ್ತಡವನ್ನು ತಂದಿದ್ದರು. ಇದೀಗ ಜಲಕ್ರೀಡೆಗೆ ಅನುಮತಿ ನೀಡಲಾಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಡೆ ಮುಖ ಮಾಡಲಿದ್ದಾರೆ. ಇನ್ನು ವೀಕೆಂಡ್ ಸಮಯದಲ್ಲಂತೂ ದಾಂಡೇಲಿ ಮತ್ತು ಜೊಯಿಡಾ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಗರಿಗೇರಲಿದೆ.