ಹಳಿಯಾಳ: ಕೋವಿಡ್ ಲಸಿಕಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹತ್ತಿರದ ಅರಣ್ಯ ನರ್ಸರಿಯೊಳಗೆ ಹಾಡುಹಗಲೆ ಮರವೊಂದನ್ನು ಕಡಿದು ತುಂಡರಿಸುತ್ತಿದ್ದ ಮೂವರನ್ನು ಪೋಲೀಸರೊಬ್ಬರು ಚಾಕಚಾಕ್ಯತೆಯಿಂದ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಹಳಿಯಾಳ ರಸ್ತೆಯಲ್ಲಿರುವ ಕಾಗದ ಕಾರ್ಖಾನೆಯ ಒಂದನೇ ಗೇಟ್ ಹತ್ತಿರವಿರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ ನಡೆದಿದೆ. ಕಾಗದ ಕಾರ್ಖಾನೆಯ ಒಂದನೇ ಗೇಟ್ ಬಳಿ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದನಗರ ಠಾಣೆಯ ಪೊಲೀಸ್ ಶಂಬಣ್ಣ ಶಿರೂರು ನರ್ಸರಿಯ ಆವರಣದ ಹೊರಗಡೆ ದೂರದಿಂದ ಮರ ಕಡಿದು ತುಂಡರಿಸುತ್ತಿರುವುದನ್ನು ನೋಡಿ, ಆ ದೃಶ್ಯವನ್ನು ಸೆರೆ ಹಿಡಿದು, ಆವರಣ ಬೇಲಿಯನ್ನು ಜಂಪ್ ಮಾಡಿ ಮರ ಕಡಿಯುತ್ತಿರುವ ಸ್ಥಳಕ್ಕೆ ಹೋಗಿ, ಮರ ತುಂಡರಿಸುತ್ತಿದ್ದ ಮೂವರನ್ನು ಹಿಡಿದು ವಿಚಾರಿಸಿ, ತಕ್ಷಣವೆ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಆ ಮೂವರನ್ನು ಹಾಗೂ ಕೃತ್ಯಕ್ಕೆ ಬಳಸಿದ 2 ಕೊಡಲಿಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆAದು ತಿಳಿದುಬಂದಿದೆ.
ಜನ ರಕ್ಷಕರಿಂದ ವನ ರಕ್ಷಣೆ
