• Slide
    Slide
    Slide
    previous arrow
    next arrow
  • ಕಾರವಾರ ಲಯನ್ಸ್ ಕ್ಲಬ್‌ನಿಂದ ಶಾಪಿಂಗ್ ಬ್ಯಾಗ್ ಬಿಡುಗಡೆ

    300x250 AD

    ಕಾರವಾರ: ಲಯನ್ಸ್ ಕ್ಲಬ್‌ನ ಚೇರ್ ಪರ್ಸನ್ ಮಹಂತೇಶ ರೇವಡಿಯವರು ಆಫೀಸ್ ಸಂದರ್ಶನದಲ್ಲಿ ಕಾರವಾರ ಲಯನ್ಸ್ ಕ್ಲಬ್‌ನ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಾರವಾರ ಲಯನ್ಸ್ ಕ್ಲಬ್ ಬಹಳ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡವರಿಗೆ, ನೊಂದವರಿಗೆ, ರೋಗಿಗಳಿಗಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದು ಶ್ಲಾಘನೀಯ ಎಂದರು. ಕ್ಲಬ್‌ನ ಅಧ್ಯಕ್ಷೆ ಐಶ್ವರ್ಯ ಮಾಸೂರ್‌ಕರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಲೋಗೋ ಇರುವ ಶಾಪಿಂಗ್ ಬ್ಯಾಗ್‌ನ್ನು ಬಿಡುಗಡೆ ಮಾಡಿದರು. ಉಪಾಧ್ಯಕ್ಷರು ಲ. ವಿನಯಾ ನಾಯಕ ಧ್ವಜವಂದನೆ ಮಾಡಿದರು. ಲ.ವಿನೋದ ನಾಯಕ ಪರಿಚಯಿಸಿದರು. ಕಾರ್ಯದರ್ಶಿ ಇಮ್ಮಿಯಾಜ ಬುಖಾರಿ ವಂದಿಸಿದರು.ಶಶಿ ಮಾಸೂರ್‌ಕರ ನಿರೂಪಿಸಿದರು. ಈ ಸಂದರ್ಭದಲ್ಲಿ ಖಜಾಂಚಿ ಅಲ್ತಾಫ್ ಶೇಖ, ಲ. ಕೆ.ಎಸ್.ಕಿನ್ನರರ್,ಎಮ್.ಜೆ.ಎಫ್.ಲ.ಇಬ್ರಾಹಿಂ ಕಲ್ಲೂರ್, ಲ. ಗಜಾನನ ಆಳ್ವಾ,ಲ, ಪ್ರೀತಮ್ ಮಾಸೂರ್‌ಕರ್ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top