ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಕಾರ್ಮಿಕ ಇಲಾಖೆ ತಾಲೂಕಾ ಕಚೇರಿಗೆ ಹೊಸ ಸ್ವರೂಪ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಜಿಲ್ಲೆಯಲ್ಲಿ ಗುರುತೇ ಸಿಗದೆ ಸ್ಥಿತಿಯಲ್ಲಿದ್ದ ಕಾರ್ಮಿಕ ಇಲಾಖೆಯ ಕಚೇರಿಗಳಿಗೆ ಸ್ವಂತ ಕಟ್ಟಡ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯು ಸಹ ಸ್ವಂತ ನಿವೇಶನ ಮಂಜೂರಿಯಾಗಿದ್ದು ನೂತನ ಕಟ್ಟಡ ಹಾಗೂ ಅತ್ಯಾಧುನಿಕ ಪೀಠೋಪಕರಣಗಳಿಂದ ಸುಸಜ್ಜಿತ ಕಚೇರಿಯಾಗಿ ಪರಿವರ್ತನೆ ಹೊಂದಲಿದೆ ಎಂದು ತಿಳಿಸಿದರು.