ಕಾರವಾರ : ಕಡಲತೀರದಲ್ಲಿರುವ ವಿವಿಧ ಫಾಸ್ಟ್ ಫುಡ್ ಸ್ಟಾಲ್ ಹಾಗೂ ನಗರದ ವಿವಿಧ ಹೊಟೇಲ್ ಗಳಲ್ಲಿ ಬಾಲ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎನ್ನುವ ಸಂಗತಿನ್ನು ಖಚಿತ ಪಡಿಸಿಕೊಳ್ಳಲು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಕಾರವಾರ ಕಡಲ ತೀರದಲ್ಲಿ ಇರುವ ವಿವಿಧ ಪಾಸ್ಟ್ ಫುಡ್ ಅಂಗಡಿ ಹಾಗೂ ಹೋಟೆಲ್ ಮೇಲೆ ಕಾರ್ಮಿಕ ಇಲಾಖೆಯ ಜಿಲ್ಲಾ ಯೋಜನಾ ನಿರ್ದೇಶಕರು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಮಕ್ಕಳ ರಕ್ಷಣಾ ಘಟಕ ಕಾರವಾರ ಇವರು ಜಂಟಿಯಾಗಿ ತಪಾಸಣೆ ನಡೆಸಿದರು. ಯಾವುದೇ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳದಂತೆ ಸೂಚನೆ ನೀಡಲಾಗಿದ್ದು ಜನಜಾಗೃತಿಗಾಗಿ ಬಿತ್ತಿ ಪತ್ರಗಳನ್ನು ಗೋಡೆಗಳ ಮೇಲೆ ಅಂಟಿಸಲಾಯಿತು.
ಕಾರ್ಮಿಕ ಇಲಾಖೆಯ ಅಧಿಕಾರಿಗಳಿಂದ ಹೊಟೇಲ್,ಫಾಸ್ಟ್ ಫುಡ್ ಸ್ಟಾಲ್ ಮೇಲೆ ದಾಳಿ
