ಹೊನ್ನಾವರ : ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಮತ್ತು ತದಡಿ ಅಘನಾಶಿನಿ ಗ್ರಾಮಗಳನ್ನು ಅತ್ಯಂತ ಹತ್ತಿರದಿಂದ ಸೇರಿಸುವ ತದಡಿ-ಅಘನಾಶಿನಿ ಬಾರ್ಜ್ ಕಳೆದ ಕೆಲವು ದಿನಗಳ ಹಿಂದೆ ದುರಸ್ತಿಯಲ್ಲಿದ್ದು, ಪ್ರಯಾಣಿಕರಿಗೆ ಸಂಚಾರಕ್ಕೆ ಸಿದ್ಧಗೊಳ್ಳುತ್ತಿದೆ. ತದಡಿಯಿಂದ ಅಘನಾಶಿನಿ ತಲುಪಬೇಕೆಂದರೆ ಪ್ರಯಾಣಿಕರಿಗೆ 40 ಕಿ.ಮೀ. ಕ್ರಮಿಸಿ ಬರಬೇಕಾಗುತ್ತಿತ್ತು. ಆದರೆ ತದಡಿಯಿಂದ ಅಘನಾಶಿನಿ ಗ್ರಾಮಕ್ಕೆ ಕೇವಲ 1 ಕಿ.ಮೀ. ಸಮುದ್ರದಲ್ಲಿ ಕ್ರಮಿಸಿದರೆ 2 ಗ್ರಾಮಗಳ ಸಂಪರ್ಕವಾಗಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎನ್ನುವುದನ್ನು ಮನಗಂಡ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಕಳೆದ ಜೂನ್ ತಿಂಗಳಿನಿAದ ಅಘನಾಶಿನಿ ತದಡಿ ಬಾರ್ಜ್ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಸಂಚಾರಕ್ಕೆ ಸಿದ್ಧಗೊಳ್ಳುತ್ತಿರುವ ಅಘನಾಶಿನಿ ಬಾರ್ಜ್
