ಕಾರವಾರ: ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿದ ಘಟನೆ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದುವಾಡಾದ ಶ್ರೀ ದುರ್ಗಾದೇವಿ ದೇವಸ್ಥಾನದ ಬಳಿ ಬ್ರೇಕ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿದ ಪರಿಣಾಮದಿಂದ ಕಾರೊಂದು ಕೆರೆಗೆ ಬಿದ್ದು ಸಂಪೂರ್ಣ ಮುಳುಗಡೆಯಾದ ಘಟನೆ ವರದಿಯಾಗಿದೆ.
ಕೈಗಾ ಸಿಬ್ಬಂದಿಯೊಬ್ಬರು ಇತ್ತೀಚೆಗೆ ಹೊಸದಾಗಿ ಕಾರು ಖರೀದಿಸಿ ತಂದಿದ್ದರು. ಅವರ ಮಗ ಕಾರು ಚಲಾಯಿಸುವುದನ್ನು ಕಲಿಯುತಿದ್ದ. ಹೀಗೆ ಕಾರು ಚಲಾಯಿಸುತ್ತಿರುವಾಗ ಗೊಂದಲ ಉಂಟಾಗಿದ್ದು, ಕೆರೆಯ ಬಳಿ ಬಂದಾಗ, ಬ್ರೇಕ್ ಒತ್ತುವ ಬದಲು ಚಾಲಕ ಎಕ್ಸಿಲೇಟರ್ ಒತ್ತಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಕಾರು ಕೆರೆಗೆ ಉರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾರು ಕೆರೆಗೆ ಉರುಳಿದ ಪರಿಣಾಮ ಕಾರಿಗೆ ಹಾನಿಯಾಗಿದೆ. ಕಾರನ್ನು ಕ್ರೇನ್ ತಂದು ಮೇಲಕ್ಕೆತ್ತಲಾಗಿದ್ದು, ಈ ಸಂಬಂಧ ಮಲ್ಲಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.