ಶಿರಸಿ: ನಗರದ ಮಾರ್ಕೇಟ್ ರೋಡಿನಲ್ಲಿರುವ ಅಭಿಷೇಕ್ ಜ್ಯುವೇಲರಿ, ಸಂಗಮ ಜ್ಯುವೇಲರಿ ಮತ್ತು ಪಾತ್ರೆ ಅಂಗಡಿಯಲ್ಲಿ ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆಸಿದ ಘಟನೆ ಬಗ್ಗೆ ವರದಿಯಾಗಿದೆ.
ನಗರದಲ್ಲಿ ಈಗೊಂದು ಸ್ವಲ್ಪ ದಿನದ ಹಿಂದಷ್ಟೇ ಗ್ರಾಹಕ ವೇಷದಲ್ಲಿ ಬಂದು ಸರಗಳನ್ನು ಎಳೆದು ಪರಾರಿಯಾದ ಘಟನೆ ತಾಲೂಕಿನಲ್ಲಿ ಹಸಿಯಾಗಿರುವಾಗಲೇ ನಿನ್ನೆ ರಾತ್ರಿ ಸರಣಿ ಕಳ್ಳತನ ಯತ್ನ ನಡೆದಿರುವುದು ಇದೀಗ ಜನತೆಗೆ ಭಯ ಹೆಚ್ಚಿಸಿದೆ.
ಕಳ್ಳರು ಅಭಿಷೇಕ್ ಜ್ಯುವೇಲರಿಯಲ್ಲಿ ತಾರಸಿಯನ್ನು ಒಡೆದು ಅಂಗಡಿಯಲ್ಲಿ ಕಳ್ಳತನಕ್ಕೆ ಪ್ರಯತ್ನ ಮಾಡಿದ್ದಾರೆ. ಆದರೆ ಬಾಗಿಲನ್ನು ಎಳೆದಾಗ ಅಲಾರಾಂ ಸಿಸ್ಟ್0 ಗಂಟೆ ಬಾರಿಸಿದಾಗ ಕಳ್ಳರು ಪಲಾಯನ ಮಾಡಿದ್ದಾರೆ ಎಂದು ಅನುಮಾನಿಸಲಾಗಿದೆ.
ಕಳ್ಳರು ಯತ್ನ ನಡೆಸಿದ್ದ ಅಷ್ಟೇ ಬಿಟ್ಟರೆ ಆಭರಣಗಳ ಕಳ್ಳತನವಾಗಿಲ್ಲವೆಂದು ವರದಿಯಾಗಿದ್ದು, ಪೆÇಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ ಪೆÇಲೀಸ್ ತನಿಖೆ ನಂತರ ಪೂರ್ಣ ಮಾಹಿತಿ ತಿಳಿದು ಬರಬೇಕಿದೆ.