• Slide
  Slide
  Slide
  previous arrow
  next arrow
 • ಲಯನ್ಸ್ ವತಿಯಿಂದ ಚಿನ್ನದ ಸಾಧಕಿಗೆ ಸನ್ಮಾನ

  300x250 AD

  ಶಿರಸಿ : ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ 20 ಚಿನ್ನದ ಪದಕ ಗಳಿಸಿ ಸಾಧನೆಗೈದ ಶಿರಸಿ ತಾಲೂಕಿನ ಶೀಗೆಹಳ್ಳಿಯ ಗ್ರಾಮೀಣ ಪ್ರತಿಭೆ ಚೈತ್ರಾ ನಾರಾಯಣ ಹೆಗಡೆ ಇವರನ್ನು ಶಿರಸಿಯ ಲಯನ್ಸ್ ಕ್ಲಬ್, ಲಯನ್ಸ್ ಶಿಕ್ಷಣ ಸಂಸ್ಥೆ, ಲಯನ್ಸ್ ಶಾಲೆಗಳ ವತಿಯಿಂದ ಇಂದು ಜಂಟಿಯಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಚೈತ್ರಾ ಹೆಗಡೆ, ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕುವುದು ಪ್ರಶಸ್ತಿ ಪದಕ ಇವೆಲ್ಲಕ್ಕಿಂತ ಮುಖ್ಯವಾದದ್ದು.ನಿರಂತರ ಅಭ್ಯಾಸ, ಪುನರ್ಮನನ ಶಿಕ್ಷಕರು ಕಲಿಸುವ ಪಾಠದೆಡೆಗೆ ಆಸಕ್ತಿ, ಅವಧಾನ ಇವೆಲ್ಲವೂ ವಿದ್ಯಾರ್ಥಿಯ ಸಾಧನೆಗೆ ಅತ್ಯವಶ್ಯಕ. ಅಲ್ಲದೆ ಆಯ್ದುಕೊಂಡ ವಿಷಯದಲ್ಲಿ ಯಾವುದೇ ತೆರನಾದ ಹಿಂಜರಿಕೆ ತೋರದೆ ಶ್ರದ್ಧೆಯಿಟ್ಟು ಓದಬೇಕು. ವಿಶೇಷ ಸಾಧನೆಗಾಗಿ ವಿದೇಶಗಳಿಗೆ ತೆರಳದೆ ದೇಶದಲ್ಲೆ ಇದ್ದು ಸಾಧನೆ ಮಾಡಬೇಕು ಎಂಬ ಕಿವಿಮಾತು ಹೇಳಿದರು. ನಂತರ ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಪ್ರಶ್ನೆಗಳಿಗೆ ಉತ್ತಮವಾಗಿ ಉತ್ತರಿಸಿದರು.

  ಲಯನ್ಸ್ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ರವೀಂದ್ರ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಚೈತ್ರಾ ಹಾಗೂ ಅವಳ ಸಾಧನೆ ನಮ್ಮವಿದ್ಯಾರ್ಥಿಗಳಿಗೆ ಪ್ರೇರಣೆ ನಮ್ಮೆದುರಿಗಿರುವ ಆದರ್ಶಗಳನ್ನು ಪರಿಚಯಿಸುದಕ್ಕಾಗಿ ಈ ಕಾರ್ಯಕ್ರಮ ಎಂದರು.ಶಿರಸಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಉದಯ ಸ್ವಾದಿ ಚೈತ್ರಾರವರನ್ನು ಆತ್ಮೀಯವಾಗಿ ಅಭಿನಂದಿಸಿ, ಸಂವಾದ ನಡೆಸಿದರು. ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ವಿ.ಜಿ. ಭಟ್ ಅಭಿನಂದಿಸಿ, ಆಶೀರ್ವದಿಸಿ, ಅಧ್ಯಕ್ಷೀಯ ಮಾತುಗಳನ್ನಾಡಿದರು.ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಚೈತ್ರಾ ಹೆಗಡೆ ಅವರ ಕಿರುಪರಿಚಯ ಮಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಶಿರಸಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿಗಳಾದ ಲಯನ್. ವಿನಯ ಹೆಗಡೆಯವರು ವಂದಿಸಿದರು. ಈ ಸಂದರ್ಭದಲ್ಲಿ ಶಿರಸಿ ಲಯನ್ಸ್ ಕ್ಲಬ್‌ನ ಖಜಾಂಚಿ ಅನಿತಾ ಹೆಗಡೆ, ಲಯನ್ನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಲಯನ್ ಪ್ರಭಾಕರ ಹೆಗಡೆ, ಲಯನ್ಸ್ ಶಿಕ್ಷಣ ಸಂಸ್ಥೆಯ ಸದಸ್ಯಶ್ಯಾಮಸುಂದರ ಭಟ್ಟ, ಲಯನ್ ಲೋಕೇಶ ಹೆಗಡೆ, ಎಮ್.ಐ. ಹೆಗಡೆ ಉಪಸ್ಥಿತರಿದ್ದರು.ಚೈತ್ರಾಳ ಪಾಲಕರು, ಲಯನ್ನಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಸಹಶಿಕ್ಷಕಿ ಮುಕ್ತಾ ನಾಯ್ಕ ನೆರವೇರಿಸಿಕೊಟ್ಟರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top