• Slide
    Slide
    Slide
    previous arrow
    next arrow
  • ಗ್ರಾ.ಪಂಚಾಯತ್ ಕೋಡ್ಕಣಿಯಲ್ಲಿ ’ಪೋಷಣಾ ಮಾಸಾಚರಣೆ’ ಯಶಸ್ವಿ

    300x250 AD

    ಕುಮಟಾ: ಇಲ್ಲಿನ ಕೋಡ್ಕಣಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಪೋಷಣಾ ಮಾಸಾಚರಣೆ ಹಮ್ಮಿಕೊಳ್ಳಲಾಯಿತು.


    ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸದಸ್ಯ ಅಣ್ಣಪ್ಪ ನಾಯ್ಕ ಉದ್ಘಾಟಿಸಿದರು. ಕಾರ್ಯದರ್ಶಿ ತಿರುಮಲೇಶ್ ಹಾಗೂ ಗ್ರಾಮ ಪಂಚಾಯತ್ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆಗಳು ಎಲ್ಲರ ಗಮನ ಸೆಳೆಯುವಂತಿತ್ತು. ನೆಲದ ಮೇಲೆ ವಿವಿಧ ಧಾನ್ಯಗಳಿಂದ ಚಿತ್ರಿಸಲಾದ ಇಲಾಖೆಯ ಲಾಂಛನಗಳು ಜನಮೆಚ್ಚುಗೆ ಪಡೆದುಕೊಂಡವು.

    300x250 AD


    ವೈದ್ಯಾಧಿಕಾರಿ ಡಾಕ್ಟರ್ ಶ್ರೇಯಾಂಕ ನಾಯಕ್ ಪೌಷ್ಟಿಕ ಆಹಾರ ಹಾಗೂ ಮಕ್ಕಳು ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು. ಮಕ್ಕಳ ರಕ್ಷಣಾ ಘಟಕದ ನಂದಿನಿ ಗೌಡರವರು ಮಕ್ಕಳ ರಕ್ಷಣೆ ಹಾಗೂ ದತ್ತು ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.


    ಆಶಾ ಕಾರ್ಯಕರ್ತೆ ವಾಸಂತಿ ಅಂಬಿಗ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕಿ ಸುಧಾ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾವತಿ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಪಟಗಾರ ಸ್ವಾಗತಿಸಿದರು. ತಿರುಪತಿ ಭಂಡಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸಹಾಯಕಿಯರು ಇನ್ನಿತರ ಸಾರ್ವಜನಿಕರು ಹಾಜರಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top