• Slide
    Slide
    Slide
    previous arrow
    next arrow
  • ಕಿರವತ್ತಿಯಲ್ಲಿ ಕವಿವಿ ಧಾರವಾಡ ಸ್ನಾತಕೋತ್ತರ ವಿಭಾಗದ ಬೇಸಿಗೆ ಶಿಬಿರಕ್ಕೆ ಚಾಲನೆ

    300x250 AD

    ಯಲ್ಲಾಪುರ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಿಂದ ತಾಲೂಕಿನ ಕಿರುವತ್ತಿಯಲ್ಲಿ 15ದಿನಗಳ ಬೇಸಿಗೆ ಶಿಬಿರ ಸೋಮವಾರ ಸಂಜೆ ಕಿರವತ್ತಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಉದ್ಘಾಟನೆಗೊಂಡಿತ್ತು.
    ಶಿಬಿರ ಉದ್ಘಾಟಿಸಿ ಮಾತನಾಡಿದ ಕಿರವತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ವರದಾನಿ ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಕಾಲೇಜುಗಳು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡು ಇಂತಹ ಸಮಾಜ ಕಾರ್ಯಗಳು ಗ್ರಾಮೀಣ ಜನರಿಗೆ ಹಾಗೂ ಜನತೆಗೆ ಮಾರ್ಗದರ್ಶನವಾಗಿವೆ ಎಂದು ತಿಳಿಸಿದರು. ಕಿರವತ್ತಿ ಪಂಚಾಯಿತಿ ವತಿಯಿಂದ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.

    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ರೆಡ್ಡಿ ಮಾತನಾಡಿ ಪ್ರಗತಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕಡು ಬಡವರು, ಅಶಿಕ್ಷಿತ ಮಹಿಳೆಯರು, ಇತರ ಜನರು ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಶಿಬಿರ ಸಾಕಷ್ಟು ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು.

    300x250 AD

    ಗ್ರಾಮ ಪಂಚಾಯತ್ ಸದಸ್ಯರಾದ ಸುನೀಲ್ ಕಾಂಬ್ಳೆ, ರಸೂಲ್ ಮುಜಾವರ್ ವೇದಿಕೆಯ ಮೇಲಿದ್ದರು ಹಾಗೂ ಸಾರ್ವಜನಿಕರು ಮತ್ತು ಪಂಚಾಯಿತಿ ಬಂಧುಗಳು ಭಾಗವಹಿಸಿದ್ದರು.

    ಶಿಬಿರಾರ್ಥಿ ಹಾಗೂ ಶಿಬಿರದ ಸಂಘಟಕ ಸಂಜಯ ಚೌಹಾನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಮಹಿಳೆಯರಿಗೆ ಸಹಾಯವಾಗುವುದರೊಂಡಿಗೆ ಅವರ ಆರೋಗ್ಯದ ಕುರಿತು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯ ಅವರ ನೇತೃತ್ವದಲ್ಲಿ ಸರ್ವಿಕಲ್ ಕ್ಯಾನ್ಸರ್ ಚೆಕಪ್ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಮತ್ತೋರ್ವರಾದ ಶಾಂತಾರಾಮ್ ಭಾಗತ್ಕರ್ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿ ವೆಂಕಟೇಶ್ ನಾಯಕ್ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top