• Slide
    Slide
    Slide
    previous arrow
    next arrow
  • ರೈತರು ಇಲಾಖೆ ಸಹಕಾರದಿಂದ ಪರಿಸರ ಬೆಳೆಸಿ; ಯತೀಶಕುಮಾರ

    300x250 AD

    ಯಲ್ಲಾಪುರ: ರೈತರು ಸೊಪ್ಪಿನಬೆಟ್ಟದಲ್ಲಿ ಅರಣ್ಯ ಬೆಳೆಸಲು ಇಲಾಖೆಯಿಂದ ಸಹಾಯ ನೀಡಲಾಗುತ್ತದೆ ಅದನ್ನು ಬಳಸಿಕೊಳ್ಳಲು ರೈತರು ಮುಂದಾಗಬೇಕು ಎಂದು ಸಿ.ಸಿ.ಎಫ್ ಯತೀಶಕುಮಾರ ಹೇಳಿದರು.


    ಅವರು ಮಂಗಳವಾರ ತಾಲೂಕಿನ ಉಮ್ಮಚಗಿಯಲ್ಲಿ ನಂದನವನ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಸಸ್ಯೋದ್ಯಾನ ಉದ್ಘಾಟಿಸಿ ಮಾತನಾಡುತ್ತಿದ್ದರು. ಸತೀಶ ಹೆಗಡೆ ಸಸ್ಯೋದ್ಯಾನ ನಿರ್ಮಿಸಿ ಮಾದರಿಯಾಗಿದ್ದಾರೆ. ಪರಿಸರ ಹಾಳಾಗುತ್ತಿದೆ ಎಂದು ಆರೋಪಿಸಿ ಕಾಲಹರಣ ಮಾಡುವುದರಿಂದ ಪ್ರಯೋಜನ ಇಲ್ಲ. ಬದಲಿಗೆ ಪರಿಸರ ಬೆಳೆಸಲು ಮುಂದಾಗ ಬೇಕೆಂದರು.


    ಸಸ್ಯ ಶಾಸ್ತ್ರಜ್ಞ ಡಾ.ಕೇಶವ ಹೆಗಡೆ ಕೂರ್ಸೆಮಾತನಾಡಿ,ಹೆಚ್ಚಿನ ಸೊಪ್ಪಿನ ಬೆಟ್ಟ ಹೊಂದಿರುವ ರೈತರು ವನ ನಿರ್ಮಾಣಕ್ಕೆ ಮುಂದಾದಲ್ಲಿ ಪರಿಸರ ಸಂರಕ್ಷಣೆ ಮಾಡ ಬಹುದು.ಔಷಧಿ ಗಿಡಗಳನ್ನು ಬೆಳೆಸಲು ಅವಕಾಶವಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮವಾದ ಔಷಧಿ ಗಿಡಗಳ ತಾಣಗಳಿದ್ದವು ಸುಮಾರು ಐದು ಸಾವಿರ ಸಸ್ಯ ಪ್ರಬೇಧಗಳು ಇದ್ದವು. ಇವತ್ತು ಒಂದು ಸಾವಿರ ಪ್ರಬೇಧಕ್ಕೆ ಬಂದಿದೆ ಹೀಗೆ ಹೋದರೆ ಮುಂದೊಂದು ದಿನ ಎಲ್ಲವನ್ನು ಕಳೆದು ಕೋಳ್ಳುವ ಆತಂಕ ಎದುರಿಸುತ್ತಿರುವ ಈ ಕಾಲದಲ್ಲಿ ಈ ರೀತಿ ವನ ನಿರ್ಮಣಕ್ಕೆ ಮುಂದಾಗಿರುವದು ಶ್ಲಾಘನೀಯ ಎಂದರು.

    300x250 AD


    ನಾಡಿ ವೈದ್ಯರಾದ ಕೃಷ್ಣೆಗೌಡ ಮಾದ್ಲಮನೆ ಮಾತನಾಡಿ ಆಯುರ್ವೇದ ವನೌಷದಿ ಬಗ್ಗೆ ವಿಸ್ತಾರವಾದ ಮಾಹಿತಿ ಹೇಳುತ್ತದೆ ನಮ್ಮ ಮನೆಯ ಪಕ್ಕದಲ್ಲಿರುವ ತುಳಸಿ ಗರಡ ಪಾತಾಳ, ನಿತ್ಯ ಪುಷ್ಪ, ಅಶ್ವಥ ಗಿಡಗಳ ಪ್ರಯೋಜನ ನಮಗೆ ಗೊತ್ತಿಲ್ಲ ನಮ್ಮ ಮಕ್ಕಳಿಗೆ ಹೇಳುವವರು ಯಾರು ಹೀಗಿರುವಾಗ ಪ್ರತಿಯೊಬ್ಬನು ಮನೆಗೊಂದು ಸಸಿ ನೆಟ್ಟು ಪಾಲಿಸಿ ನಾನು ನಾಡಿವೈದ್ಯನಾಗಿ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ ಬಹುತೇಕ ಗಿಡ ಮೂಲಿಕೆ ಬಳಸಿ ರೋಗ ಕಡಿಮೆ ಮಾಡಿದ್ದೇನೆ ಎಂದರು.


    ವಿದ್ವಾನ್ ನಾಗೇಂದ್ರ ಭಟ್ಟ ಹಿತ್ಲಳ್ಳಿ ಮಾತನಾಡಿ” ವೇದಗಳ ಕಾಲದಿಂದಲೂ ದೇವರ ಕಾಡಿನ ಹೆಸರಲ್ಲಿ ಕಾಡನ್ನು ಸಂರಕ್ಷಿಸಲಾಗುತ್ತಿತ್ತು. ಸಸ್ಯ ಸಂಕುಲಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಂಡು ಹೋಗಬೇಕೆಂದರು.

    ಆರ್.ಎಫ್ ಒ ಕೆ.ಮಹೇಶ, ಗ್ರಾ.ಪಂ ಅಧ್ಯಕ್ಷೆ ರೂಪಾ ಪೂಜಾರಿ, ಸದಸ್ಯ ಕುಪ್ಪಯ್ಯ ಪೂಜಾರಿ, ಪ್ರಮುಖರಾದ ಮಂಜುನಾಥ ಹೆಗಡೆ, ಪ್ರಕಾಶ ಮಂಚಾಲೆ ಸಾಗರ, ರಮೇಶ ಜಕ್ಕೋಳ್ಳಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top