ಕಾರವಾರ : ನಗರದಲ್ಲಿ ರವಿವಾರದ ಸಂತೆಯನ್ನು ರದ್ದು ಮಾಡಿ ಆದೇಶ ಮಾಡಿದ್ದರೂ ಸಹ ಜಿಲ್ಲೆಯ ವಿವಿಧ ತಾಲೂಕು ಹಾಗೂ ಉತ್ತರ ಕರ್ನಾಟಕ ಭಾಗದಿಂದ ಅನೇಕ ಜನರು ತರಕಾರಿ ವ್ಯಾಪಾರಕ್ಕಾಗಿ ಆಗಮಿಸುತ್ತಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಗೊಂದಲ ಉಂಟಾಗಿ ಸಾಕಷ್ಟು ಜನರು ತರಕಾರಿ ಖರೀದಿಗಾಗಿ ಒಂದೇ ಕಡೆ ಸೇರುತ್ತಿದ್ದಾರೆ. ತರಕಾರಿ ತಂದಿರುವವರಲ್ಲಿ ಬೇರೆ ಜಿಲ್ಲೆಯಿಂದಲೂ ಆಗಮಿಸಿದ್ದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು ನಗರಸಭೆ ಮುಂದಿನ ಆದೇಶದವರೆಗೆ ಕಾರವಾರ ನಗರದಲ್ಲಿ ರವಿವಾರದ ಸಂತೆ ಮಾರುಕಟ್ಟೆ ಸ್ಥಗಿತ ಮಾಡಿದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ನಗರಸಭೆ ಕಚೇರಿಯ ಆವರಣದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಮುಂದಿನ ಆದೇಶದವರೆಗೆ ನಗರದಲ್ಲಿ ಸಂತೆ ರದ್ದು ಮಾಡಲಾಗಿದ್ದು ಸಂತೆ ಆರಂಭದ ದಿನ ಮುಂಚಿತವಾಗಿ ತಿಳಿಸಲಾಗುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ರವಿವಾರದ ಸಂತೆ ರದ್ದು
