ಶಿರಸಿ: ಎಲ್ಲಾ ತರಹದ ಒಡೆದ ಅಡಿಕೆ ಸೇರಿದಂತೆ ಎಲ್ಲಾ ಮಾದರಿಯ, ಮಳೆಗಾಲದ ಹಸಿ ಅಡಿಕೆಗೆ ಟೆಂಡರ್ ವ್ಯವಸ್ಥೆಯನ್ನು ನಗರದ ಟಿಎಸ್‍ಎಸ್ ವ್ಯಾಪಾರಿ ಅಂಗಳದಲ್ಲಿ ಸೆ.27ರಿಂದ ಪ್ರಾರಂಭವಾಗಲಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಳೆಗಾಲದ ಸಮಯದಲ್ಲಿ ಬೀಳುತ್ತಿರುವ ಗೋಟಡಿಕೆ, ಹಸಿರು ಅಡಿಕೆ, ಸಿಪ್ಪೆ ಗೂಡಿದ ಕೊಳೆ ಅಡಿಕೆ ಸೇರಿ ಎಲ್ಲಾ ತರಹದ ಒಡೆದ ಅಡಿಕೆ ಸೇರಿದಂತೆ ಎಲ್ಲಾ ಮಾದರಿಯ, ಮಳೆಗಾಲದ ಹಸಿ ಅಡಿಕೆಗೆ ಟೆಂಡರ್ ವ್ಯವಸ್ಥೆ ಪ್ರಾರಂಭವಾಗಲಿದೆ. ಸೆ.27 ಸೋಮವಾರದಿಂದ ಟೆಂಡರ್ ನಡೆಯಲಿದ್ದು, ರವಿವಾರ ಹೊರತುಪಡಿಸಿ ಉಳಿದೆಲ್ಲ ದಿನ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಮಳೆಗಾಲದ ಈ ಸಮಯದಲ್ಲಿ ಒಣಗಿಸಲು ಹಾಗೂ ಸಂಸ್ಕರಿಸಲು ಅಡಚಣೆ ಹಾಗೂ ಅನಾನುಕೂಲತೆ ಉಳ್ಳವರು ಈ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೇ ಈ ಟೆಂಡರ್ ವ್ಯವಸ್ಥೆಯಲ್ಲಿ ಮಳೆಗಾಲದಲ್ಲಿ ಉದುರಿದ ಹಸಿ ಅಡಿಕೆ ಖರೀದಿಸಲು ಯಾವುದೇ ಆಸಕ್ತ ವ್ಯಕ್ತಿಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 18 ರಿಂದ ಮುಂಡಗೋಡಿನಲ್ಲಿ, ಅ.25 ರಿಂದ ದಾಸನಕೊಪ್ಪದಲ್ಲಿ ಮತ್ತು ನವೆಂಬರ್’ನಿಂದ ಶಿರಸಿಯಲ್ಲಿ ಹಸಿ ಅಡಿಕೆ ಟೆಂಡರ್ ನಡೆಯಲಿದೆ ಎಂದು ತಿಳಿಸಿದ್ದಾರೆ. ರೈತರು ಇನ್ನೂ ಹೆಚ್ಚಿನ ಹೆಚ್ಚಿನ ಮಾಹಿತಿ ಬೇಕಾದಲ್ಲಿ 8088312312 ಸಂಪರ್ಕಿಸಬಹುದೆಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.