ಶಿರಸಿ: ತಾಲೂಕಿನ ಸರನ ಗದ್ದೆಯ ಮನೆಯೊಂದರ ಮೇಲ್ಛಾವಣಿ ಅಡಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಶಾಂತ ಹುಲೇಕಲ್ ಹಿಡಿದು ಸುರಕ್ಷಿತ ಕಾಡಿಗೆ ಬಿಟ್ಟರು.
ಮನೆಯಲ್ಲಿ ಕಾಳಿಂಗ ಇರುವುದನ್ನು ಗಮನಿಸಿದ ಮನೆಯವರು, ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಅವರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಬಂದ ಪ್ರಶಾಂತ ಕಾಳಿಂಗ ಸರ್ಪವನ್ನು ಅತ್ಯಂತ ಸಾಹಸದಿಂದ ಹಿಡಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ನಂತರ ಶಿವಗಂಗಾ ಫಾಲ್ಸ್ ಬಳಿಯ ನಿರ್ಜನ ಪ್ರದೇಶದ ರಕ್ಷಿತಾರಣ್ಯದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಈ ಸಂದರ್ಭದಲ್ಲಿ ಹುಲೇಕಲ್ ವಲಯ ಆರ್. ಎಫ್. ಒ. ಮಂಜುನಾಥ ಹೆಬ್ಬಾರ, ಡಿವೈಆರ್. ಎಫ್. ಒ. ರಾಘವೇಂದ್ರ ಹೆಗಡೆ, ಅರಣ್ಯ ರಕ್ಷಕ ರಾಜೇಶ ನಾಯ್ಕ, ದಾವಲಸಾಬ ಎರಗಟ್ಟಿ, ವಾಹನ ಚಾಲಕ ನಾಗರಾಜ ಇದ್ದರು.