ಯಲ್ಲಾಪುರ: ಕಂಪ್ಲಿ ಮಂಚಿಕೇರಿಯಲ್ಲಿ ಪಶು ಆಸ್ಪತ್ರೆ ಇದ್ದೂ ಪ್ರಯೋಜನವಿಲ್ಲದಂತಾಗಿದೆ. ಪಶು ಆಸ್ಪತ್ರೆಗೆ ವೈದ್ಯರಿಲ್ಲದೆ ಅನಾರೋಗ್ಯಕ್ಕೊಳಗಾದ ಗೋವುಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದು, ಪಶುವೈದ್ಯರ ನೇಮಕಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಹಿಂದೆ ಇದ್ದ ಪಶು ವೈದ್ಯರು ಬೇರೆಡೆಗೆ ವರ್ಗ ಮಾಡಿಸಿ ಕೊಂಡು ಹೋದ ಮೇಲೆ ಎಲ್ಲದಕ್ಕೂ ತಾಲೂಕಾಸ್ಪತ್ರೆಗೆ ಹೋಗಬೇಕು. ಸಾಮಾಜಿಕ ಕಾರ್ಯಕರ್ತ ವಿನೋದ ನಾಯಕ ಮನೆಯಲ್ಲಿ ಜರ್ಸಿ ಆಕಳು ಮತ್ತು ಕರು ಸಾವನ್ನಪ್ಪಿದೆ. ಆಕಳು ಕರು ಹಾಕಲಾಗದೆ ಕಷ್ಟ ಪಡುತ್ತಿರುವುದನ್ನು ಕಂಡು ಪಶು ವೈದ್ಯರಿಗೆ ಫೋನ್ ಮಾಡಿದರೆ ತನಗೆ ಬರಲು ಸಾಧ್ಯವಿಲ್ಲ. ಹೆದರಬೇಡಿ ಕರು ಹಾಕುತ್ತದೆ ಎಂಬ ಧೈರ್ಯ ಹೇಳಿದರು. ಮರು ದಿನ ಪುನಃ ಫೋನ್ ಮಾಡಿದಾಗ ಬಂದು ಕರುವನ್ನು ಗರ್ಭದಿಂದ ಹೊರ ತೆಗೆದಾಗ ,ಕರು ಹೊಟ್ಟೆಯೊಳಗೆ ಸತ್ತಿತ್ತು. ಅಲ್ಲದೆ ಎರಡು ತಂಗಳ ಹಿಂದೆ ಗಬ್ಬವಿದ್ದ ಆಕಳು ಸಹ ಸತ್ತು ಹೋಗಿತ್ತು. ಇಂತಹ ಅನೇಕ ಘಟನೆ ಈ ಭಾಗದಲ್ಲಿ ಆಗುತ್ತಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಆದಷ್ಟು ಬೇಗ ಮಂಚಿಕೇರಿ ಪಶು ಆಸ್ಪತ್ರೆಗೆ ಓರ್ವ ವೈದ್ಯರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮಂಚಿಕೇರಿಯಲ್ಲಿ ಪಶುವೈದ್ಯರ ನೇಮಕಕ್ಕೆ ಆಗ್ರಹ
