ಶಿರಸಿ: ಹಿಂದೂ ಆಸ್ತಿಕರ ಪೂಜಾ ಕೇಂದ್ರವಾದ ದೇವಾಲಯಗಳು ಸಾರ್ವಜನಿಕ ಆಸ್ತಿಯಾಗಿರುವುದರಿಂದ ಅಕ್ರಮ ಎನಿಸಲಾರದು. ಹಿಂದಿನಿoದಲೂ ಅಸ್ಥಿತ್ವದಲ್ಲಿರುವ ದೇವಸ್ಥಾನಗಳು ಸಾರ್ವಜನಿಕ ಜಾಗದಲ್ಲಿದ್ದರೆ ಅಕ್ರಮ ದೇವಸ್ಥಾನಗಳು ಎಂದು ಕರೆಯುವುದು ತಪ್ಪು ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠಾಧೀಶರಾದ ಶ್ರೀ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹೆಸರಿನಲ್ಲಿ ರಾಜ್ಯಾದ್ಯಂತ ಇರುವ ಕೆಲವು ಹಿಂದೂ ದೇವಸ್ಥಾನಗಳನ್ನು ಅಕ್ರಮ ದೇವಸ್ಥಾನಗಳೆಂದು ಗುರುತಿಸಿ ರಾಜ್ಯ ಸರಕಾರ ದೇವಸ್ಥಾನಗಳನ್ನು ತೆರವುಗೊಳಿಸಲಿದೆ ಎನ್ನುವುದು ಆಘಾತಕಾರಿ ವಿಷಯ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ 459 ದೇವಸ್ಥಾನಗಳನ್ನು ತೆರವು ಮಾಡುವ ಕುರಿತು ಗುರುತಿಸಲಾಗಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳಾಗಿರುವ ದೇವಸ್ಥಾನಗಳನ್ನು ರಕ್ಷಿಸುವುದು ಸರಕಾರದ ಕರ್ತವ್ಯವಾಗಿದೆ ಎನ್ನುವುದು ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಸ್ಥಾನಗಳ ಮಹಾಮಂಡಳದ ಒಮ್ಮತದ ಅಭಿಪ್ರಾಯವಾಗಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ದೇವಾಲಯಗಳನ್ನು ಸಂರಕ್ಷಿಸುವುದು ಸರಕಾರದ ಕರ್ತವ್ಯ; ಸ್ವರ್ಣವಲ್ಲೀ ಶ್ರೀ
