ಬೆಂಗಳೂರು: ಬೇರೆ-ಬೇರೆ ರೀತಿಯ ಬಡ್ಡಿ ದರವನ್ನು ಡಿಸಿಸಿ ಬ್ಯಾಂಕ್’ಗಳು ನಿಗದಿ ಮಾಡಿ ಬಡ್ಡಿ ದರ ವಿಧಿಸುತ್ತಿದೆ. ಎಲ್ಲ 21 ಡಿಸಿಸಿ ಬ್ಯಾಂಕ್’ಗಳಲ್ಲಿ ಏರರೂಪದ ಬಡ್ಡಿ ದರ ನಿಗದಿಮಾಡುವಂತೆ ಶೀಘ್ರದಲ್ಲಿ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭರವಸೆ ನೀಡಿದ್ದಾರೆ.
ಜಿಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವ ರೈತರಿಗೆ ಬಡ್ಡಿ ರಿಯಾಯಿತಿ ನೀಡುವ ಸಲುವಾಗಿ ಪ್ರಶ್ನೆ ಕೇಳಿದ ಮರಿತಿಬ್ಬೆಗೌಡ ಅವರಿಗೆ ಉತ್ತರಿಸಿದ ಸಚಿವರು, ಏಕರೂಪ ಬಡ್ಡಿ ದರ ನಿಗದಿ ಮಾಡಲಾಗುತ್ತದೆ ಎಂದರು.