• first
    second
    third
    previous arrow
    next arrow
  • ಮಾಜಾಳಿ ಕಡಲ ತೀರದಲ್ಲಿ ಅಳಿವಿನಂಚಿನ ಟೈಗರ್ ಶಾರ್ಕ್ ಕಳೆಬರ ಪತ್ತೆ

    300x250 AD

    ಕಾರವಾರ: ಇಲ್ಲಿನ ಮಾಜಾಳಿ ಕಡಲ ತೀರದಲ್ಲಿ ಟೈಗರ್ ಶಾರ್ಕ್‍ನ ಕಳೇಬರ ಪತ್ತೆಯಾಗಿದೆ.


    ಪತ್ತೆಯಾಗಿರುವ ಹೆಣ್ಣುಟೈಗರ್ ಶಾರ್ಕ್ ಸುಮಾರು 2 ಮೀಟರ್ ಉದ್ದವಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಸುಮಾರು 30 ಕೆ.ಜಿ. ತೂಕ ಹೊಂದಿದೆ. ಈ ಮೀನನ್ನು ಇಲ್ಲಿನ ಜನರು ಇಷ್ಟಪಡದ ಕಾರಣ ಕಡಲತೀರದಲ್ಲಿ ಹಾಗೇ ಬಿಡಲಾಗಿದೆ.

    300x250 AD


    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೈಗರ್ ಶಾರ್ಕ್ ಗೆ ಭಾರೀ ಬೇಡಿಕೆ ಇದ್ದು ಇದರ ಸೂಪ್ ಮಾಡಿ ಅಲ್ಲಿನ ಜನರು ಸೇವನೆ ಮಾಡುತ್ತಾರೆ ಎಂದು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಅವರು ಮಾಹಿತಿ ನೀಡಿದ್ದಾರೆ.


    ಸಾಮಾನ್ಯವಾಗಿ ಟೈಗರ್ ಶಾರ್ಕ್ 600 ಕೆ.ಜಿ. ಹಾಗೂ ಆರು ಮೀಟರ್ ವರೆಗೂ ಬೆಳೆಯುತ್ತದೆ. ಇವುಗಳು 30 ರಿಂದ 40 ವರ್ಷದ ವರೆಗೆ ಜೀವಿಸುವ ಇವು, ಸಮುದ್ರದ ಬಲಿಷ್ಠ ಮೀನುಗಳಲ್ಲಿ ಒಂದಾಗಿದೆ. ತಿಮಿಂಗಲ, ಮನುಷ್ಯರು ಸೇರಿದಂತೆ ಇನ್ನಿತರ ಸಮುದ್ಯ ಜೀವಿಗಳ ಮೇಲೆ ದಾಳಿ ಮಾಡುವ ಸಾಮಥ್ರ್ಯ ಹೊಂದಿದೆ. ಟೈಗರ್ ಶಾರ್ಕ್ ಈಗ ಅಳಿವಿನ ಅಂಚಿನಲ್ಲಿರುವ ಮೀನು ಎಂದು ಕೆಂಪು ಪುಸ್ತಕದಲ್ಲಿ ದಾಖಲಿದೆ ಎಂದು ಡಾ. ಹರಗಿ ಅವರು ಮಾಹಿತಿ ನೀಡಿದರು.

    Share This
    300x250 AD
    300x250 AD
    300x250 AD
    Back to top