ಶಿರಸಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಜವಾದ ಜನಪರ ಸರಕಾರವಾಗಿ, ಜನರ ಕಷ್ಟಗಳಿಗೆ, ಅವರ ಸುಖ ದುಃಖಗಳಲ್ಲಿ ಭಾಗವಹಿಸುತ್ತಿರುವ ಜನಪರ, ಜನರಿಗಾಗಿ ಇರುವ ಬಿಜೆಪಿ ಸರಕಾರ ಅದರ ಒಂದೊಂದು ಯೋಜನೆಗಳು ಫಲಾನುಭವಿಗಳನ್ನು ಮುಟ್ಟುತ್ತಿರುವುದು ಅತ್ಯಂತ ಸ್ಪಷ್ಟ. ಕೇವಲ ವಿರೋಧಕೋಸ್ಕರ ವಿರೋಧ ಮಾಡದೆ ನಿಜವಾದ ವಿರೋಧ ಪಕ್ಷವಾಗಿ ಕಾಂಗ್ರೇಸ ತನ್ನ ಹೊಣೆಗಾರಿಕೆಯನ್ನು ಅರಿತು ನಡೆದುಕೊಳ್ಳುವುದು ಅಗತ್ಯವೆಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ತಿಳಿಸಿದ್ದಾರೆ.
ಅವರು ನಿನ್ನೆ ಕಾಂಗ್ರೇಸ್‍ವಕ್ತಾರ ಶ್ರೀ ದೀಪಕ ದೊಡ್ಡೂರು ಅವರ ಪತ್ರಿಕಾ ಹೇಳಿಕೆಯನ್ನು ವಿರೋಧಿಸಿ ಈ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ. ಕಳೆದೆರಡು ವರ್ಷಗಳಿಂದ ಕರೋನಾದಂತ ಮಹಾಮಾರಿಯ ನಡುವೆಯು ದೇಶದ ಆರ್ಥಿಕತೆಗೆ ಸಮಸ್ಯೆಯಾದರೂ ಕೂಡ ಈ ದೇಶದ 80 ಕೋಟಿ ಜನರಿಗೆ ಉಚಿತವಾಗಿ ನವೆಂಬರವರೆಗೆ ಪ್ರಧಾನ ಮಂತ್ರಿ ಗರೀಬ ಕಲ್ಯಾಣ ಯೋಜನೆಯಡಿಯಲ್ಲಿ ಪಡಿತರ ನೀಡುತ್ತಿರುವುದು, ಈ ದೇಶದ ಆರೋಗ್ಯವಾದ ಈ ದೇಶದ ಪ್ರತಿಯೊಬ್ಬರು ಆರೋಗ್ಯದಿಂದಿರಬೇಕು ಎಂಬ ಭಾವನೆಯೊಂದಿಗೆ ಈ ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡುತ್ತಿರುವುದು, ರೈತರ ಕಷ್ಟಗಳಿಗೆ ಸ್ಪಂದಿಸುತ್ತಾ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಲ್ಲಿ ಪ್ರತಿಯೊಬ್ಬರ ಅಕೌಂಟಗಳಿಗೆ 9ನೇ ಕಂತನ್ನು ಪಾವತಿ ಮಾಡಿದ್ದು, ಈ ದೇಶದ ಬಡ ತಾಯಂದಿರ ಕಣ್ಣೀರು ಒರೆಸಲು ಉಜ್ವಲಾ 2.0 ಜಾರಿಗೆ ತಂದಿದ್ದು, ಅಸಂಘಟಿತ ಕಾರ್ಮಿಕ ವಲಯಕ್ಕೆ ರಾಜ್ಯ ಸರಕಾರದಿಂದ ಸೌಲಭ್ಯ ನೀಡುತ್ತಿರುವುದು ಈ ಕಾಮಾಲೆ ಕಣ್ಣಿನ ಕಾಂಗ್ರೆಸ್‍ಗೆ ಕಾಣಿಸುತ್ತಿಲ್ಲವೇ?
ಕಳೆದೆರಡು ವರ್ಷಗಳಿಂದ ದೇಹಲಿಯಲ್ಲಿ ಕಾಂಗ್ರೆಸಿನ ಕೃಪಾ ಪೋಷಿತವಾದ ರೈತ ಚಳುವಳಿಗೆ ಈ ದೇಶದ ಎಷ್ಟೋ ಜನ ರೈತರು ಬೆಂಬಲ ನೀಡಿದ್ದಾರೆ. ಕಾಯಿದೆ ಬಗ್ಗೆ ಈ ದೇಶದ ಕೃಷಿ ಮಂತ್ರಿ 13 ಬಾರಿ ಮಾತುಕತೆ ಕರೆದರೂ ತಮ್ಮ ನಾಯಕರ ಸ್ವಹಿತಕ್ಕೋಸ್ಕರ ರೈತ ಕಾಯಿದೆಯನ್ನು ವಿರೋಧಿಸುತ್ತಿದೆ. ಈಗ ರೈತ ಕಾಯಿದೆಯ ವಿರೋಧಿ ಚಳುವಳಿಯ ಮಾನಸಿಕತೆ ಏನೆಂಬುದು ಈಡೀ ದೇಶಕ್ಕೆ ಗೊತ್ತಾಗಿದೆ. ಅಲ್ಲಾ ಹೋ ಅಕ್ಬರ ಘೋಷಣೆಯೊಂದಿಗೆ ಈ ದೇಶದಲ್ಲಿ ಅಶಾಂತಿ ಹುಟ್ಟಿಸುವ ಕೆಲಸಕ್ಕೆ ಈ ರೈತ ಚಳುವಳಿದಾರರು ಕರೆಕೊಟ್ಟಿದ್ದು, ಈ ಕಾಂಗ್ರೇಸಿನ ಅಸಲಿಯತ್ತನ್ನು ಅನಾವರಣಗೊಳಿಸಿದೆ.
ಇನ್ನು ಪೆಟ್ರೋಲ್, ಡಿಸೈಲ್ ದರ ಕಾಂಗ್ರೇಸ್ ಈ ದೇಶಕ್ಕೆ ಕೊಟ್ಟ ಬಳುವಳಿ 2014 ರ ಚುನಾವಣೆಯನ್ನು ಗೆಲ್ಲಲು `ಆಯ್ಲಬಾಂಡ್’ ಮೂಲಕ ಕೊಲ್ಲಿ ರಾಷ್ಟ್ರಗಳಲ್ಲಿ ಸಾಲ ಮಾಡಿಟ್ಟಿದ್ದನ್ನು ಮೋದಿ ಸರ್ಕಾರ ತೀರಿಸಿದ್ದನ್ನು ಕಾಂಗ್ರೆಸ್ ಮರೆಯಬಾರದು. ಎಲ್ಲೋ ಅಧಿಕಾರಕ್ಕೋಸ್ಕರ ದೇಶದ ಹಿತವನ್ನು ಬಲಿಕೊಟ್ಟು ಕಾಂಗ್ರೇಸ್ಸಿನಿಂದ ಬಿ.ಜೆ.ಪಿ ಸರಕಾರಗಳು ಕೇಳಬೇಕಾದ್ದು ಏನೂ ಇಲ್ಲ. ಇನ್ನಾದರೂ ವಿರೋಧಕ್ಕೋಸ್ಕರ ವಿರೋಧ ಮಾಡದೇ, ರಚನಾತ್ಮಕ ವಿರೋಧ ಪಕ್ಷವಾಗಿ ಕಾಂಗ್ರೇಸ್ ನಡವಳಿಕೆ ತಿದ್ದಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.