ಶಿರಸಿ: ನಗರದ ದೇವಿಕೆರೆ ಸ್ಫೂರ್ತಿ ಕೇರಂ ಅಸೋಸಿಯೇಷನ್‍ನಲ್ಲಿ ಸೆ. 18 ಶನಿವಾರ ಹಾಗೂ ಸೆ.19 ಭಾನುವಾರ ನಡೆದ ಕೇರಂ ಡಬಲ್ಸ್ ಪಂದ್ಯಾವಳಿ ನಡೆದು ಮೊದಲ ಬಹುಮಾನವನ್ನು ಶಿರಸಿಯ ಫಾಝಿಲ್ ಮತ್ತು ಅಣ್ಣಪ್ಪ ಗಳಿಸಿದರು.
ದ್ವಿತೀಯ ಸ್ಥಾನವನ್ನು ಶಿರಸಿಯ ಪ್ರತೀಕ ಭಟ್ ಹಾಗೂ ಪ್ರಮಥ ಹೆಗಡೆ, ತೃತೀಯ ಸ್ಥಾನವನ್ನು ರಾಘು ಕೋಡ್ಕಣಿ ಹಾಗೂ ಅನೀಸ್ ತೃತೀಯ ಸ್ಥಾನ ಪಡೆದುಕೊಂಡರು. ಬಹುಮಾನವನ್ನು ಹಿರಿಯ ಆಟಗಾರರಾದ ಜೂಜೆ ರೋಡ್ರಿಗಸ್ ಹಾಗೂ ವಿನಾಯಕ್ ನಾಯ್ಕ್ ಉದಯೋನ್ಮುಖ ಆಟಗಾರ ಮತ್ತು ಕಲಾವಿದ ಪುನೀತ್ ಇವರು ವಿಜೇತರಿಗೆ ಟ್ರೋಫಿ ವಿತರಿಸಿದರು. ಅಧ್ಯಕ್ಷರಾದ ಚಂದ್ರು ಭಟ್ ನಿರಂತರ ಆಟ ಆಡಲು ಸ್ಫೂರ್ತಿ ಕೇರಂ ಅಸೋಸಿಯೇಷನ್ ಅನುವು ಮಾಡಿಕೊಡುತ್ತದೆ ಎಂದು ಭರವಸೆ ನೀಡಿದರು.