ಕುಮಟಾ: ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿನ ಕಾನೂನು ಸುವ್ಯವಸ್ಥೆಗೆ ಅಡ್ಡ ಬಂದರೆ ಅವರ ವಿರುದ್ಧ ಕಾನೂನಾತ್ಮಕ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೆವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಕೊರೊನಾ ನಿಯಮ ಸಡಿಲಿಕೆಯಿಂದ ದೇವಸ್ಥಾನಕ್ಕೆ ಭಕ್ತಾದಿಗಳ ಆಗಮನ, ಸೇವೆ ಪೂಜೆಗಳು ಹೆಚ್ಚುತ್ತಿದೆ. ಈ ನಡುವೆ ಬರುವಂಥ ಭಕ್ತಾದಿಗಳಿಗೆ ಅರ್ಚಕರ ಗಲಾಟೆಯಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಸೆ.27 ರಂದು ಅವರ ಬಳಿ ಲಿಖಿತ ಹೇಳಿಕೆ ಪಡೆದು ಕಾನೂನಾತ್ಮಕವಾಗಿ ನಿರ್ಧಾರವನ್ನು ಸಮಿತಿ ಅಧ್ಯಕ್ಷರು ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.