ಶಿರಸಿ: ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ಸೆ.21 ಮಂಗಳವಾರದಂದು ಕ್ಲಸ್ಟರ ಮಟ್ಟದ ಪೆÇೀಷಣಾ ಮಾಸಾಚರಣೆ ಅತ್ಯಂತ ವಿಶಿಷ್ಟವಾಗಿ ನೆರವೇರಿತು.
ಪೌಷ್ಟಿಕ ವನ ನಿರ್ಮಾಣದ ಅಂಗವಾಗಿ ಮೊದಲಿಗೆ ಗಿಡಗಳನ್ನು ನೆಡಲಾಯಿತು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ವಿವಿಧ ಪೌಷ್ಟಿಕ ಆಹಾರ ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿದ್ದರು. ಮಕ್ಕಳು ರಚಿಸಿದ ಬೇಳೆ ತರಕಾರಿಗಳ ರಂಗೋಲಿ ಹಾಗೂ ವಿವರಗಳನ್ನು ಒಳಗೊಂಡ ಚಾರ್ಟ್ ಕಣ್ಮನ ಸೆಳೆಯುವಂತೆ ಇತ್ತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿ ಬೆಂಚಳ್ಳಿ ಮಕ್ಕಳು ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ಶ್ರಮ ವಹಿಸಿ ಕೆಲಸ ಮಾಡಬೇಕು, ಝಂಕ್ ಫುಡ್ ಬಿಡಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್. ಎಮ್. ಹೆಗಡೆ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಹವ್ಯಾಸ ನಮ್ಮದಾಗಬೇಕು ಎಂದರು.
ಬಿಸಲಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮೊದಲು ಈಗಿರುವ ಸೌಲಭ್ಯಗಳು ಇರಲಿಲ್ಲ ಈಗ ಸರ್ಕಾರ ಅನೇಕ ಯೋಜನೆಗಳನ್ನು ಆರೋಗ್ಯಕ್ಕಾಗಿ ರೂಪಿಸಿದೆ. ಅದರ ಪ್ರಯೋಜನ ಎಲ್ಲರು ಪಡೆದು ಉತ್ತಮವಾಗಿ ಅಭ್ಯಾಸ ಮಾಡಿ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರೇಂದ್ರ ಶಾಸ್ತ್ರಿ, ಗ್ರಾಪಂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಭಾಮಾ, ಸಿಆರ್‍ಪಿ ಮಂಜಣ್ಣ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಲೋಕನಾಥ ನಿರ್ವಹಿಸಿದರೆ, ಶಿಕ್ಷಕಿ ಸವಿತಾ ಭಟ್ ವಂದಿಸಿದರು. ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.