ಹಳಿಯಾಳ: ಆಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೇರವಾಡದ ಅಂಗನವಾಡಿ ಕೇಂದ್ರದ ಹತ್ತಿರದಲ್ಲಿರುವ ಗುಡಿಸಲು ಮನೆಯೊಂದರಲ್ಲಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಕೇರವಾಡದ ಅಂಗನವಾಡಿ ಕೇಂದ್ರದ ಹತ್ತಿರದ ನಿವಾಸಿಯಾಗಿರುವ ಲಲಿತಾ ಯಾನೆ ಅಶ್ವಿನಿ ಸಂಜು ಗಾವಡೆ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾಳೆ ಈಕೆ ಕುಡಿತದ ಚಟಕ್ಕೆ ಅಂಟಿಕೊoಡಿದ್ದಾಳೆoದು ಹೇಳಲಾಗುತ್ತಿದ್ದು, ಕುಡಿದ ಅಮಲಿನಲ್ಲಿ ನೇಣಿಗೆ ಶರಣಾಗಿದ್ದಾಳೆಂದು ತಿಳಿದು ಬಂದಿದೆ. ಮೃತಳಿಗೆ ನಾಲ್ವರು ಮಕ್ಕಳಿದ್ದು, ಗಂಡ ಟ್ರಕ್ ಕ್ಲೀನರ್ ಕೆಲಸ ನಿರ್ವಹಿಸುತ್ತಿದ್ದಾನೆಂದು ತಿಳಿದು ಬಂದಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸೈ ಐ. ಆರ್.ಗಡೇಕರ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.