ಶಿರಸಿ: ಪ್ರತಿಯೊಬ್ಬ ಮಾನವ ತನ್ನದೇ ಆದಂತ ಹವ್ಯಾಸ ಬೆಳೆಸಿಕೊಂಡಿರುವ ನಿದರ್ಶನ ಇಂದಿನ ಸಮಾಜದಲ್ಲಿ ನೋಡುತ್ತಿರುತ್ತೇವೆ. ಅದರಂತೆ ಹವ್ಯಾಸದೊಂದಿಗೆ ಮಾನವೀಯ ಮೌಲ್ಯ ಸ್ಪಂದನೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ಶಿರಸಿಯ ಯುವ ವಕೀಲ, ಶ್ವಾನ ಪ್ರೇಮಿ ಸುರೇಶ ದೇಶಭಂಡಾರಿ ಅವರ ಕಾರ್ಯ ಇಂದಿನ ಸಮಾಜಕ್ಕೆ ಆದರ್ಶಮಯ.
ಕಳೆದ ಒಂದು ದಶಕದಿಂದ ಹಸಿವಿನಲ್ಲಿ ಇರುವ ನಾಯಿಗಳಿಗೆ ಆಹಾರ, ಅಪಘಾತದಿಂದ ನೋವಿನಲ್ಲಿರುವ ನಾಯಿಗಳಿಗೆ ಚಿಕಿತ್ಸೆ, ಕೇರ್ ಟೇಕರ್ ಇಂದ ನಾಯಿಗಳಿಗೆ ವಾರಸುದಾರರನ್ನ ಹುಡುಕಿಕೊಡುವದು, ಮಾತು ಬಾರದ ನಾಯಿಗಳಿಗೆ ಪಾಲಕರ ಪ್ರೀತಿ ತೋರಿಸಿ ಇಂತಹ ನಾಯಿಗಳ ವಿಶ್ವಾಸ ಗಳಿಸಿರುವದು ಸುರೇಶ ದೇಶಭಂಡಾರಿ ಅವರ ಪ್ರಶಂಸನೆಯ ಕಾರ್ಯ ಎಂದರೇ ತಪ್ಪಾಗಲಾರದು.
ಕಾರಿನಲ್ಲಿ ಕೋಟು, ಪುಸ್ತಕ, ಪ್ರಕರಣದ ಪೈಲ್ ಜೋತೆ ದಿನನಿತ್ಯ ಮನೆಯಿಂದ ಸಾರಿನಲ್ಲಿ ಕಲಸಿದ ಅನ್ನದ 4-5 ಡಬ್ಬಗಳು, ಬಿಸ್ಕೇಟ್ ಇಟ್ಟಿಕೊಂಡಿರುವದು ವಿಶೇಷ. ವಕೀಲರ ಕಾರ್ಯಾಲಯದ ಆವರಣಕ್ಕೆ ಮತ್ತು ನ್ಯಾಯಾಲಯದ ಆವರಣಕ್ಕೆ ಪ್ರವೇಶ ಮಾಡಿದಾಕ್ಷಣ ನಾಯಿಗಳು ಬಾಲ ಅಲುಗಾಡಿಸುತ್ತಾ ದೇಶಭಂಡಾರಿಯವರನ್ನು ಹಿಂಬಾಲಿಸುತ್ತಿರುವ ದೃಶ್ಯ ಮಾನವೀಯ ಮೌಲ್ಯದ ಪೂರಕ ಎಂದರೇ ತಪ್ಪಾಗಲಾರದು.
ರಿಸ್ಕ ಕೇರ್ ನೀತಿ:
ನಾಯಿಗಳಿಗೆ ಯೋಗ್ಯ ಆಹಾರ ನೀಡುವ ಹವ್ಯಾಸದೊಂದಿಗೆ ಅನಾಥ ನಾಯಿಗಳಿಗೆ ಸೂಕ್ತ ವಾರಸುದಾರ ಮಾಲೀಕರನ್ನು ಹುಡುಕಿ ಅಂತವರಿಗೆ ನಾಯಿ ಸಾಕಲು ಖಾಯಂ ವಾರಸುದಾರರನ್ನು ನೀಡುವ ಸ್ವಯಂ ಪ್ರೇರಿತ `ರಿಸ್ಕ ಕೇರ್’ ನೀತಿ ಮಾಡಿಕೊಂಡಿದ್ದು ಇರುತ್ತದೆ. ಸುರೇಶ ಭಂಡಾರಿಯವರು ಇಲ್ಲಿಯವರೆಗೆ 25 ಕ್ಕೂ ಮಿಕ್ಕಿ ನಾಯಿಗಳ ಯೋಗ್ಯ ವಾರಸುದಾರರಿಗೆ ಸಾಕಲು ನೀಡಿರುವ ಮತ್ತು ದಿನನಿತ್ಯ 20 ಕ್ಕೂ ಮಿಕ್ಕಿ ನಾಯಿಗಳಿಗೆ ಆಹಾರ ಒದಗಿಸುವ ಕ್ರಮ ಸಾರ್ವಜನಿಕ ಪ್ರಶಂಶೆಗೆ ಕಾರಣವಾಗಿದೆ