ಅಂಕೋಲಾ: ತಾಲೂಕಿನ ಹಳವಳ್ಳಿ ಹೆಬ್ಬಾರ ಮನೆಯ ರಜೀತ್ ನಾರಾಯಣ ಹೆಬ್ಬಾರ ಈತನು ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯ ಇಂಜಿನೀಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 340ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ.
ರಜೀತನು ನಾರಾಯಣ ಹೆಬ್ಬಾರ್ ಮತ್ತು ವಿನಯಾ ಹೆಬ್ಬಾರ್ ಪುತ್ರನಾಗಿದ್ದು, ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದಲ್ಲಿ ಮುಂದು. ಪ್ರಾಥಮಿಕ ಶಿಕ್ಷಣವನ್ನು ಊರಿನ ಹಳವಳ್ಳಿ ಶಾಲೆಯಲ್ಲಿ ಕಲಿತು, ನಂತರದ ಶಿಕ್ಷಣವನ್ನು ಮೂಡಬಿದ್ರೆಯ ಆಳ್ವಾಸ್‌ನಲ್ಲಿ ಪಡೆಯುತ್ತಿದ್ದ. ದ್ವಿತೀಯ ಪಿಯುಸಿಯಲ್ಲೂ ನೂರಕ್ಕೆ ನೂರರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾನೆ. ಈತನ ಈ ಸಾಧನೆಗೆ ಕುಟುಂಬದವರು, ಊರವರು, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.