ಯಲ್ಲಾಪುರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿAದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಆರಂಭವಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಡಿಪೋ ಮೆನೆಜರ್ ಸಂತೋಷ ವರ್ಣೆಕರ ಸಾಂಕೇತಿಕವಾಗಿ ಪಾಸ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಶಾಲೆಯ ಪ್ರವೇಶ ಪತ್ರದೊಂದಿಗೆ ಪಾಸ್ ಪಡೆಯಲು ಅರ್ಜಿ ನೀಡಿದಲ್ಲಿ ಪಾಸ್ ನೀಡಲಾಗುವದು. ಸಾರ್ವಜನಿಕರ ಬಹುದಿನದ ಬೇಡಿಕೆಯಂತೆ ಪ್ರತಿ ದಿನ ಯಲ್ಲಾಪುರದಿಂದ ರಾತ್ರಿ 7 ಗಂಟೆಗೆ ಬೆಂಗಳೂರಿಗೆ ರಾಜಾಹಂಸ ಬಸ್ ಪ್ರಾರಂಭಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಲೆಕ್ಕಪತ್ರ ಮೇಲ್ವಿಚಾರಕರಾದ ವಿ. ಎನ್. ಹೊನ್ನಾವರ, ಶ್ರೀಪಾದ ಬಾಡ್ಕರ, ಶ್ರೀಧರ ಜಿ.ಕೆ.ಉಪಸ್ಥಿತರಿದ್ದರು.
ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ
