ಕುಮಟಾ: 2011ರಿಂದ ಸಿದ್ದಾಪುರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಸಿಕೊಂಡಿದ್ದ ಅಪರಾಧ ಪ್ರಕರಣಕ್ಕೆ ಸಂಬoಧಿಸಿದ ಅಬ್ದುಲ್ ಶುಕೂರ್ ಖಾನ್‌ನನ್ನು ಇಂದು ಕುಮಟಾ ತಾಲೂಕಿನ ಸಂತೆಗುಳಿಯಲ್ಲಿ ಸಿದ್ದಾಪುರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಬದ್ರಿನಾಥ್, ಶಿರಸಿ ಡಿವೈಎಸ್ಪಿ ರವಿ ಡಿ.ನಾಯ್ಕ ಮಾರ್ಗದರ್ಶನದಲ್ಲಿ ಸಿದ್ದಾಪುರ ಸಿಪಿಐ ಕುಮಾರ್ ಕೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಮಂಜೇಶ್ವರ್ ಚಂದಾವರ, ಮಹಾಂತಪ್ಪ ಕುಂಬಾರ್, ಸಿಬ್ಬಂದಿಗಳಾದ ಗಂಗಾಧರ್ ಹೊಂಗಲ್, ರಮೇಶ್ ಕೂಡಲ, ರವಿ ಜೆ.ನಾಯ್ಕ ಪಾಲ್ಗೊಂಡಿದ್ದರು.