ಶಿರಸಿ: ಕರ್ನಾಟಕ ಸರ್ಕಾರವು ರಾಷ್ಟ್ರಕವಿ ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ’ ಗೀತೆಗೆ ಧಾಟಿ ನಿಗದಿ ಮಾಡಲು ಹೊರಟಿದ್ದು, ಅದನ್ನು, ನಾಡು ಕಂಡ ಅಪ್ರತಿಮ ಗಾಯಕ, ಸಂಗೀತ ನಿರ್ದೇಶಕ ಡಾ. ಸಿ ಅಶ್ವತ್ಥ ರವರ ಸಂಯೋಜನೆಯನ್ನು ಅಳವಡಿಸಲು ಕೋರುತ್ತೇವೆ ಎಂದು ಕದಂಬ ಕಲಾ ವೇದಿಕೆ ಅಧ್ಯಕ್ಷ ಶಿರಸಿ ರತ್ನಾಕರ ಮನವಿ ಮಾಡಿದ್ದಾರೆ.
ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿ ಅಶ್ವಥ್ ಅವರ ಧಾಟಿಯು ಪ್ರತೀ ಶಾಲೆಯಲ್ಲಿಯೂ ಚಿರಪರಿಚಿತವಾಗಿದೆ. ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ಏಕಕಾಲಕ್ಕೆ ಒಂದು ಸಾವಿರಕ್ಕೂ ಅಧಿಕ ಮಕ್ಕಳು ಏಕಕಾಲಕ್ಕೆ ಒಕ್ಕೊರಲಿನಿಂದ ಹಾಡಿ ದಾಖಲೆ ಸೃಷ್ಟಿಸಿದ್ದಾರೆ. ಹಾಡಲು, ಹೇಳಿಕೊಡಲು, ಹಾಗೂ ಮಕ್ಕಳು ಮಾತ್ರವಲ್ಲದೇ ದೊಡ್ಡವರಿಗೂ ಕಲಿಯಲು ಸುಲಭಸಾಧ್ಯವಾದ ಧಾಟಿ ಇದಾಗಿರುವುದರಿಂದ ನಮ್ಮ ನಾಡಗೀತೆಗೆ ಡಾ.ಸಿ ಅಶ್ವತ್ಥ ಅವರ ರಾಗ ಮತ್ತು ಸಂಗೀತ ಸಂಯೋಜನೆಯ ಧಾಟಿಯನ್ನೇ ಅಧಿಕೃತಗೊಳಿಸಿ ಆದೇಶಿಸಬೇಕಾಗಿ ಎಂತಿಸುತ್ತೇವೆ ಎಂದು ತಿಳಿಸಿದ್ದಾರೆ.