ಯಲ್ಲಾಪುರ: ನಗರದ ಬೀಸಗೋಡ ಕ್ರಾಸ್ ಬಳಿ ಅತೀ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸೊಂದು ಪಾದಚಾರಿಗೆ ಡಿಕ್ಕಿಯಾದ ಪರಿಣಾಮ ಆತ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು 27 ವರ್ಷದ ರವಿ ನಾರಾಯಣ ಸಿದ್ಧಿ ಅರಬೈಲ್ ಎಂದು ಗುರುತಿಸಲಾಗಿದೆ. ಈತನು ಬೀಸಗೋಡ್ ಕ್ರಾಸ್ ಸಮೀಪ ರಸ್ತೆ ದಾಡುತ್ತಿದ್ದಾಗ ಹುಬ್ಬಳ್ಳಿ ಕಡೆಯಿಂದ ವೇಗವಾಗಿ ಬಂದ ಬಸ್ ಡಿಕ್ಕಿಯಾಗಿ ಈತನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಸ್ ಚಾಲಕನ ವಿರುದ್ದ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.