ಶಿರಸಿ: ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ (ರಿ), ಶಿರಸಿ ಇವರು ನಡೆಸುತ್ತಿರುವ ಮಹಾದೇವ ಭಟ್ ಕೂರ್ಸೆ ಕಿವುಡು ಮಕ್ಕಳ ವಸತಿ ಶಾಲೆಗೆ ಇಲ್ಲಿನ ನೆಹರು ನಗರದ ಹನುಮಗಿರಿಯ ನಿವಾಸಿಗಳಾದ ನಿವೃತ್ತ ಹೈಸ್ಕೂಲ್ ಶಿಕ್ಷಕಿ ಶಾಲಿನಿ ರಾಮಚಂದ್ರ ಭಟ್ಟ ಹಾಗೂ ಅವರ ಪತಿ, ಗಣಪತಿ ಹೆಗಡೆ ಅವರು ತಮ್ಮ ಪುತ್ರ ದಿವಂಗತ ಸುರೇಶ ಇವರ ಸ್ಮರಣಾರ್ಥ 2,00,000 ರೂ.ಗಳ ದೇಣಿಗೆಯನ್ನು ನೀಡಿ ಸಂಸ್ಥೆ ನಡೆಸುತ್ತಿರುವ ಸೇವಾ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ದಂಪತಿಗಳು ಸಹೃದಯತೆಯಿಂದ ನೀಡಿದ ದೇಣಿಗೆಯ ಮೊತ್ತವನ್ನು ಸಂಸ್ಥೆಯ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ, ಕಾರ್ಯದರ್ಶಿ ಮಂಜುನಾಥ ಭಟ್ ಕಾರೆಕೊಪ್ಪ ಹಾಗೂ ನಿರ್ವಾಹಕ ಜಗದೀಶ ಭಟ್ಟ ಅವರು ಸ್ವೀಕರಿಸಿದರು. ಸಂಸ್ಥೆ ಅವರು ನೀಡಿರುವ ಉದಾರ ದೇಣಿಗೆಗೆ ತುಂಬಾ ಆಭಾರಿಯಾಗಿದೆ ಹಾಗೂ ಈ ಬಗ್ಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿತು.