ಯಲ್ಲಾಪುರ: ತಾಲೂಕಿನಲ್ಲಿ ಸೋಮವಾರ 11 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, ಸಕ್ರಿಯ 27 ಕೇಸ್ ಪ್ರಕರಣವಿದೆ.
ಇಂದು ಮಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 8, ಯಲ್ಲಾಪುರ-ನಂದೊಳ್ಳಿ ಸೇರಿ ಮೂರು ಕೇಸ್ ಸಕ್ರಿಯವಾಗಿದೆ. ತಾಲೂಕಿನಲ್ಲಿ ಈವರೆಗೆ 4,063 ಕೇಸ್ ದಾಖಲಾಗಿದ್ದು, 4001 ಮಂದಿ ಗುಣಮುಖರಾಗಿದ್ದಾರೆ. ಒಟ್ಟೂ 35 ಮಂದಿ ಸಾವನ್ನಪ್ಪಿದ್ದಾರೆ.
ತಾಲೂಕಿನ ಎಲ್ಲೆಲ್ಲಿ ಲಸಿಕೆ ಲಭ್ಯ ?:
ತಾಲೂಕಿನಲ್ಲಿ ಸೆ.21 ಮಂಗಳವಾರ 1750 ಡೋಸ್ ಲಸಿಕೆ ಲಭ್ಯವಿದ್ದು, ಅದನ್ನು ಯಲ್ಲಾಪುರ ತಾಲೂಕಾಸ್ಪತ್ರೆಯಲ್ಲಿ 200 ಡೋಸ್, ಚವತ್ತಿಯಲ್ಲಿ 200, ಮಂಚಿಕೇರಿಯಲ್ಲಿ 300, ಕುಂದರಗಿ 300, ಕಿರವತ್ತಿ 300, ವಜ್ರಳ್ಳಿ 100, ಕಳಚೆ 50, ಮಲವಳ್ಳಿ 100, ನಂದೊಳ್ಳಿಯಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.