ಶಿರಸಿ: ಇಲ್ಲಿನ ಉಪ ವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಶಿಥಿಲಗೊಂಡ ತಂತಿಗಳ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರಿಕಾಂಬಾ ಮಾರ್ಗದ ಕೋಟೆಕೆರೆ, ಕರಿಗುಂಡಿ ರಸ್ತೆ, ಇಂದಿರಾನಗರ, ಮಾರಿಕಾಂಬಾನಗರ, ಬನವಾಸಿ ರಸ್ತೆ, ರಾಮನಬೈಲ್ ಹಾಗೂ ಇಂಡಸ್ಟ್ರೀಯಲ್ ಏರಿಯಾದ ಪ್ರದೇಶಗಳಲ್ಲಿ ಸೆ.22 ಬುಧವಾರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.