• Slide
  Slide
  Slide
  previous arrow
  next arrow
 • ಆರು ಶಿಕ್ಷಕರಿಗೆ ‘ನೇಷನ್ ಬಿಲ್ಡರ್ ಅವಾರ್ಡ- 2021’ ಗೌರವ

  300x250 AD

  ಕುಮಟಾ: ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ಇಂಟರ್ ನ್ಯಾಷನಲ್ ರವರು ಸಾಧಕ ಶಿಕ್ಷಕರನ್ನು ಗುರುತಿಸಿ ಸೆ.17 ರಂದು ರೋಟರಿ ಸಭಾಭವನದಲ್ಲಿ 6 ಜನ ಶಿಕ್ಷಕರಿಗೆ ‘ನೇಷನ್ ಬಿಲ್ಡರ್ ಅವಾರ್ಡ- 2021’ ನೀಡಿ ಗೌರವಿಸಲಾಯಿತು.

  ಕಾರ್ಯಕ್ರಮದಲ್ಲಿ ಕುಮಟಾ ಡಯಟ್ ಪ್ರಾಂಶುಪಾಲರಾದ ಈಶ್ವರ ಎಚ್.ನಾಯ್ಕ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಇಂತಹ ಸ್ಪೂರ್ತಿದಾಯಕ ಕಾರ್ಯಕ್ರಮಗಳು ರೋಟರಿಯಿಂದ ನಡೆಯುತ್ತಿರುವುದು ಶ್ಲಾಘನೀಯ. ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನಿಸಲು ಸಂತಸವಾಗುತ್ತಿದೆ” ಎಂದು ಅಭಿಪ್ರಾಯಪಟ್ಟರು. ಶಿಕ್ಷಕರಾದ ರವೀಂದ್ರ ಭಟ್ ಸೂರಿ, ಮಂಜುನಾಥ ಎಂ.ನಾಯ್ಕ, ಶೈಲಾ ಡಿ.ನಾಯ್ಕ, ಡಿ.ಜಿ.ಪಂಡಿತ, ಹರೀಶ್ಚಂದ್ರ ಗುನಗಾ ಹಾಗೂ ಸಂಧ್ಯಾ ರಾಯ್ಕರ್ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

  300x250 AD

  ಈ ಸಂದರ್ಭದಲ್ಲಿ ಕುಮಟಾ ರೋಟರಿ ಕ್ಲಬ್ ನ ಅಧ್ಯಕ್ಷರಾದ ಡಾ. ನಮಿತಾ ಶಾನಭಾಗ ಸರ್ವರನ್ನೂ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಶಿಲ್ಪಾ ಜಿನರಾಜ ವರದಿ ವಾಚಿಸಿದರು. ರೋಟರಿಯ ಪದಾಧಿಕಾರಿಗಳಾದ ಸುರೇಶ ಭಟ್, ವಸಂತ ರಾವ್, ಅತುಲ ಕಾಮತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top