ಶಿರಸಿ: ಮಕ್ಕಳ ಉತ್ತಮ ಭವಿಷ್ಯಕ್ಕೆ ವಿದ್ಯಾರ್ಥಿ ಮತ್ತು ಶಿಕ್ಷರ ಪರಿಶ್ರಮವೇ ಮಹತ್ವ. ಮಕ್ಕಳ ಉತ್ತಮ ಅಭ್ಯಾಸ ದೇಶದ ಮುಂದಿನ ಭವಿಷ್ಯ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ಸೋಮವಾರ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆಯ ಮಕ್ಕಳಿಗೆ ತಮ್ಮ ಟ್ರಸ್ಟ್ ವತಿ ಯಿಂದ ಉಚಿತ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು. ಕಲಿಕೆ ಹಾಗೂ ಬೋಧನೆ ಶಿಕ್ಷಣ ಕ್ಷೇತ್ರಗಳ ಅದರಲ್ಲೂ ಶಿಕ್ಷಕನ ಪ್ರಮುಖ ಕರ್ತವ್ಯವೆಂದು ತಿಳಿದಿರುವಂತೆ, ಇಂದಿನ ಆಧುನಿಕ ಕಲಿಕಾ ವಿಧಾನ ಹಾಗೂ ಪ್ರಾಚೀನ ಕಲಿಕಾ ವಿಧಾನಗಳಿಗೆ ಹೋಲಿಸಿದಾಗ ಪ್ರಾಚೀನ ಕಾಲದ ಕಲಿಕೆ ಕೇವಲ ಶಿಕ್ಷಣ ಮಾತ್ರವಲ್ಲದೇ ಮಾನವೀಯ ಮೌಲ್ಯಗಳು, ನೈತಿಕ ನಡವಳಿಕೆಗಳು ಕಲಿಕೆಯ ಒಂದು ಭಾಗವಾಗಿ ಮಾರ್ಪಾಡಾಗಿತ್ತು ಮತ್ತು ಹಾಗೇ ಇರಬೇಕಾದದು ಕೂಡ.
ಹೀಗಾಗಿ ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಮನದಲ್ಲಿ ಇದ್ದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದವರು, ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.