ಭಟ್ಕಳ : ಇಲ್ಲಿನ ಪುರವರ್ಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಂಗ್ಲ ಮಾಧ್ಯಮದ೧ ಮತ್ತು ೨ನೇ ತರಗತಿ, ಶಾಲಾ ರಂಗಮAದಿರವನ್ನು ಸೋಮವಾರ ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಕುರಿತು ಪಾಲಕರಲ್ಲಿ ಕೀಳರಿಮೆ ಸಲ್ಲ, ಸರಕಾರ ಗುಣಮಟ್ಟದ ಶಿಕ್ಷಣವನ್ನು ನೀಡಲು ಆಂಗ್ಲ ಮಾಧ್ಯಮ ಶಾಲೆಯನ್ನು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿಯೇ ತೆರೆಯುತ್ತಿದೆ ಎಂದ ಅವರು ಪ್ರವೇಶವನ್ನು ೩೦ ರಿಂದ ೫೦ ಮಾಡಲು ಸರಕಾರಕ್ಕೆ ಮನವಿ ಸಲ್ಲಿಸಿದ್ದು ಮಂಜೂರಿಯಾಗುವ ವಿಶ್ವಾಸವಿದೆ ಎಂದರು. ಗ್ರಾಮೀಣ ಭಾಗದಲ್ಲಿ ಸರಕಾರದ ಆಂಗ್ಲಮಾಧ್ಯಮ ಶಾಲೆಗೆ ಉತ್ತಮ ಪ್ರತಿಕ್ರಿಯೆ ಇದ್ದು ಹಲವು ಶಾಲೆಗಳಲ್ಲಿ ೧೦೦-೧೫೦ ಅರ್ಜಿಗಳು ಬರುತ್ತಿವೆ. ಆದರೆ ೩೦ಕ್ಕೆ ಸರಕಾರ ಸೀಟುಮಿತಗೊಳಿಸಿದ್ದು ಆಯ್ಕೆ ಮಾಡುವುದು ಸುಲಭವಲ್ಲ ಎಂದು ಹೇಳಿದರು.
ಭಟ್ಕಳದಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ
