ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂಪರ್ ಬಜಾರನಲ್ಲಿರುವ ವಾಸುದೇವ ಜನರಲ್ ಸ್ಟೋರ್ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಒಸಿ ಮಟ್ಕಾ ಆಡುಸುತ್ತಿದ್ದ ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ದಾಳಿಯ ಸಮಯಕ್ಕೆ ಆರೋಪಿತನಿಂದ 1250 ನಗದು ಹಾಗೂ ಆಟದ ಸಲಕರಣೆ ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಲಾಭಕ್ಕಾಗಿ ಜನರಿಂದ ಹಣ ಪಡೆದು ಪಟದ ಅಂಕ ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿ, ಒಸಿ ಮಟಕಾ ಅಂಕೆ ಸಂಖ್ಯೆಯ ಅಂಕಿಯನ್ನು ಬರೆದು ಕೊಡುತ್ತಾ ಜನರಿಂದ ಹಣ ಪಡೆದುಕೊಂಡು ಓಸಿ ಮಟಕ ಜುಗಾರಾಟ ಆಡಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದಾರೆ. ಮಂಕಿ ಪೊಲಿಸ್ ಠಾಣಿಯಲ್ಲಿ ನಿನ್ನೆ ರಾತ್ರಿ ಪ್ರಕರಣ ದಾಖಲಾಗಿದೆ