ಭಟ್ಕಳ: ಇಲ್ಲಿನ ವೆಂಕಟಾಪುರ ಹೊಳೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ವೆಂಕಟ್ರಮಣ ನಾಗಪ್ಪ ಗೊಂಡ (51) ಮೃತಪಟ್ಟ ವ್ಯಕ್ತಿ. ಜಾಲಿ ಪ.ಪಂ ವ್ಯಾಪ್ತಿಯ ವೆಂಕಟಾಪುರ ದೋಣದಾರಿ ನಿವಾಸಿಯಾದ ಈತ ಶನಿವಾರವೇ ಗದ್ದೆ ಕೆಲಸಕ್ಕೆಂದು ಮನೆಯಿಂದ ತೆರಳಿದ್ದ. ರವಿವಾರ ವೆಂಕಟಾಪುರ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಪ್ರಾರಂಭಿಸಿದ್ದಾರೆ.