ಬೆಂಗಳೂರು: ಕನ್ನಡ ಕಾಯಕ ವರ್ಷ ಆಚರಣೆ ಅಂಗವಾಗಿ, ಕನ್ನಡ ನಾಡಿನ ಅಧಿಕೃತ ಶುಭಕಾರಿ ಚಿತ್ರ (ಮಾಸ್ಕೊಟ್) ರಚಿಸುವ ರಾಜ್ಯಮಟ್ಟದ ಸ್ಪರ್ಧೆಯನ್ನು ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆಯೊಂದಿಗೆ ಬೆಂಗಳೂರಿನ ಕನಕಪುರ ರಸ್ತೆ ಕನ್ನಡ ಬಳಗವು ಆಯೋಜಿಸಿತ್ತು. ಚಿತ್ರಸ್ಪರ್ಧೆಯ ಪ್ರಥಮ ಬಹುಮಾನ ಶಿರಸಿಯ ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿ ರಚಿಸಿದ `ಕನ್ನಡಿಗ’ ಅಕ್ಷರ ಚಿತ್ರ ಪಡೆದುಕೊಂಡಿದೆ. ಬಹುಮಾನವು ರೂ.5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ದ್ವಿತೀಯ ಬಹುಮಾನ ಬೆಂಗಳೂರಿನ ವಿ.ಆರ್.ಸಿ.ಶೇಖರ್ ಹಾಗೂ ತೃತೀಯ ಬೆಂಗಳೂರಿನ ರಘುಪತಿ ಶೃಂಗೇರಿಯವರ ಚಿತ್ರ ಆಯ್ಕೆ ಆಗಿದೆ ಎಂದು ಸಂಘಟಕಿ ಕನ್ನಡ ಬಳಗದ ಭಾರ್ಗವಿ ಹೇಮಂತ್ ತಿಳಿಸಿದ್ದಾರೆ.
ಬಹುಮಾನ ವಿತರಣೆ ಮತ್ತು ಅಧಿಕೃತ ಶುಭಕಾರಿ ಚಿತ್ರ ಬಿಡುಗಡೆ ಕಾರ್ಯಕ್ರಮ ಸೆ.19 ಭಾನುವಾರ ಬೆಂಗಳೂರಿನಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಟಿ.ಎಸ್,ನಾಗಾಭರಣ. ಖ್ಯಾತ ಚಲನಚಿತ್ರ ನಿರ್ದೇಶಕರು ಹಾಗೂ ಅಧ್ಯಕ್ಷರು,ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ-ಇವರು ಭಾಗವಹಿಸಿದ್ಧರು. ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಬಹುಮಾನ ವಿತರಿಸಿದರು. ಇಂಡಿಯಾ ಆಯುರ್ವೇದ ಫೌಂಡೇಷನ್ ಅಧ್ಯಕ್ಷರಾದ ಡಾ.ಸಿ.ಎ,ಕಿಶೋರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು.
ಕನ್ನಡ ಬಳಗದ ಸ್ಥಾಪಕಿ ಭಾರ್ಗವಿ ಕನ್ನಡನಾಡು ಮತ್ತು ತಂಡ, ಹಾಗೂ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಶುಭಕಾರಿ ಚಿತ್ರ ರಚನಾ ಸ್ಪರ್ಧೆ ನಡೆಯಿತು.