• Slide
  Slide
  Slide
  previous arrow
  next arrow
 • ಸೆ.19ಕ್ಕೆ ‘ಪಿತೃಪಕ್ಷ- ಶ್ರಾದ್ಧವಿಧಿ: ಶಾಸ್ತ್ರ-ಸಂದೇಹ ನಿವಾರಣೆ’ ಆನ್‍ಲೈನ್ ವಿಶೇಷ ಸಂವಾದ

  300x250 AD

  ಶಿರಸಿ: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ `ಪಿತೃಪಕ್ಷ ಹಾಗೂ ಶ್ರಾದ್ಧವಿಧಿ: ಶಾಸ್ತ್ರ ಹಾಗೂ ಸಂದೇಹನಿವಾರಣೆ’ ಈ ‘ಆನ್‍ಲೈನ್’ ವಿಶೇಷ ಸಂವಾದವನ್ನು ಸೆ.19 ಸಂಜೆ 7 ಗಂಟೆಗೆ ಕನ್ನಡ ಭಾಷೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

  ಗಣೇಶೋತ್ಸವಾದ ನಂತರ ಪಿತೃಪಕ್ಷವು ಪ್ರಾರಂಭವಾಗುತ್ತದೆ. ಹಿಂದೂ ಧರ್ಮದಲ್ಲಿ, ಪಿತೃಋಣ'ವನ್ನು ತೀರಿಸುವುದಕ್ಕಾಗಿ ಶ್ರಾದ್ಧವಿಧಿ ಮಾಡಲು ವಿಶೇಷ ಮಹತ್ವವನ್ನು ನೀಡಲಾಗಿದೆ. ಆದರೆ ಸಮಾಜದಲ್ಲಿ ಶ್ರಾದ್ಧ ಮಾಡುವ ಮಹತ್ವ ಮತ್ತು ಆ ಬಗೆಗಿನ ಧರ್ಮಶಾಸ್ತ್ರದ ಮಾಹಿತಿ ಇಲ್ಲದ್ದರಿಂದ ಶ್ರಾದ್ಧದ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಹರಡಿವೆ. ಇಂತಹ ಸಮಯದಲ್ಲಿ ಶಾಸ್ತ್ರವನ್ನು ಅರ್ಥ ಮಾಡಿಕೊಂಡು ಧರ್ಮಾಚರಣೆ ಮಾಡಿದರೆ ಅದರಿಂದ ಹೆಚ್ಚು ಲಾಭವಾಗುತ್ತದೆ. ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಇವರು ಈ ವಿಷಯದ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.

  300x250 AD

  ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿಪಿತೃಪಕ್ಷದಲ್ಲಿ ಯಾವ ದಿನದಂದು ಶ್ರಾದ್ಧ ಮಾಡುವುದು ಉತ್ತಮ?’, ಯಾರು ಶ್ರಾದ್ಧವನ್ನು ಮಾಡಬೇಕು?',ಸದ್ಯ ಕೊರೋನಾದ ಸಂಕ್ರಮಣ ನಡೆಯುತ್ತಿರುವಾಗ ಶ್ರಾದ್ಧ ಮಾಡಲು ಪುರೋಹಿತರು ಸಿಗದಿದ್ದರೆ ಏನು ಮಾಡಬೇಕು ?’, ಶ್ರಾದ್ಧಕ್ಕಾಗಿ ವಸ್ತುಗಳು ಸಿಗದಿದ್ದರೆ ಶ್ರಾದ್ಧಪಕ್ಷವನ್ನು ಹೇಗೆ ಮಾಡಬೇಕು ?',ಪಿತೃದೋಷ ದೂರ ಮಾಡಲು ಏನು ಪರಿಹಾರಗಳು ಇವೆ ?’ ಈ ರೀತಿಯ ಅನೇಕ ಪ್ರಶ್ನೆಗಳ ಉತ್ತರಗಳು ಈ ಕಾರ್ಯಕ್ರಮದಲ್ಲಿ ನೀಡಲಾಗುವುದು. ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ಈ ಕೆಳಗಿನ ಲಿಂಕ್‍ನಲ್ಲಿ ಪ್ರಸಾರ ಮಾಡಲಾಗುವುದು. Youtube.com/HJSKarnataka ಹೆಚ್ಚಿನ ಮಾಹಿತಿಗೆ 9480567514 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top