ಶಿರಸಿ: ತಾಲೂಕಿನ ಬನವಾಸಿ ಸಮೀಪದ ಸಂತೋಳ್ಳಿಯಲ್ಲಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಸಿದ್ದಾಪುರದ ಮಳವಳ್ಳಿ ಶಿಲ್ಪಾ ವಿಜಯೇಂದ್ರ ಪಾಟೀಲ್(23) ಮೃತಳಾದ ಮಹಿಳೆ. ಆಕೆಯ ಪತಿ ವಿಜಯೇಂದ್ರ ಪಾಟೀಲ್ ಆಕೆಯ ನಡತೆಯ ಮೇಲೆ ಸಂಶಯ ಪಟ್ಟು ಕಿರುಕುಳ ನೀಡಿತ್ತಿದ್ದ. ಆದ್ದರಿಂದ ಆಕೆಯನ್ನು ತವರು ಮನೆ ಸಂತೊಳ್ಳಿಗೆ ಕರೆತಂದು ಬೈದು ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾನೆ. ಮನೆಯ ಫ್ಯಾನ್’ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.